ತುಮಕೂರು: ಸಚಿವ ಮಾಧುಸ್ವಾಮಿ ಒಬ್ಬ ಸಮರ್ಥ ನಾಯಕ. ಬಿಜೆಪಿ ಸರ್ಕಾರದ ಒಬ್ಬ ಕ್ರೀಯಾಶೀಲ ಸಚಿವ ತುಮಕೂರು ಜಿಲ್ಲೆಯಲ್ಲಿ ಉಸ್ತುವಾರಿಯಾಗಿ ಒಳ್ಳೆ ಕೆಲಸ ಮಾಡಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಹೊಗಳಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, ಮಾಧುಸ್ವಾಮಿ ಅವರನ್ನು ಜಿಲ್ಲೆಯ ಜವಾಬ್ದಾರಿಯಿಂದ ಮುಕ್ತಗೊಳಿಸಿದ್ದರಿಂದ ನಮಗೆ ನಿರಾಸೆಯಾಗಿದೆ. ಇದರಿಂದ ತುಮಕೂರು ಜಿಲ್ಲೆಯ ಜನತೆಗೆ ನಷ್ಟವಾಗಿದೆ ಎಂದರು.
ಓದಿ: ದೇಶದಲ್ಲಿಂದು 2.85 ಲಕ್ಷ ಹೊಸ ಕೇಸ್.. ಕೋವಿಡ್ಗೆ 665 ಬಲಿ
ಅವರು ಸ್ವಲ್ಪ ಕೋಪಿಷ್ಟರಾಗಿರಬಹುದು. ಆದರೆ ಸಮರ್ಥ ನಾಯಕ. ಇದು ಬಿಜೆಪಿ ಸರ್ಕಾರದಿಂದ ತುಮಕೂರು ಜನತೆಗೆ ಮಾಡಿದ ಅನ್ಯಾಯ ಎಂದಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ