ತುಮಕೂರು: ಗೃಹ ಸಚಿವರಾಗಿ ತಪ್ಪಿತಸ್ಥರನ್ನು ಶಿಕ್ಷಿಸುವ ಕೆಲಸ ಮಾಡಬೇಕು, ಆದರೆ ಅವರು ನೀಡಿರುವುದು ಅತ್ಯಂತ ಕೀಳುಮಟ್ಟದ ಪ್ರತಿಕ್ರಿಯೆ ಎಂದು ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದರು.
ತುಮಕೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನವರಿಗೂ ಆರಗ ಜ್ಞಾನೇಂದ್ರ ಅವರನ್ನು ರೇಪ್ ಮಾಡುವ ವಿಚಾರಕ್ಕೂ ಏನ್ ಸಂಬಂಧ ಎಂದು ಪ್ರಶ್ನಿಸಿದ ಅವರು, ಇದು ಬಹಳ ಕೀಳುಮಟ್ಟದ ಪ್ರತಿಕ್ರಿಯೆ ಎಂದರು.
ಇಂತಹ ಪ್ರಶ್ನೆಗಳು ಬಂದಾಗ ಬಹಳ ಎಚ್ಚರಿಕೆಯಿಂದ ಪ್ರತಿಕ್ರಿಯೆ ಮಾಡಬೇಕಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ದೇಶ, ರಾಜ್ಯದಲ್ಲಿ ಅತ್ಯಾಚಾರಗಳ ಸಂಖ್ಯೆ ಜಾಸ್ತಿ ಆಗಿದೆ ಅನ್ನೋದನ್ನು ಅಂಕಿಅಂಶಗಳು ಹೇಳುತ್ತವೆ ಎಂದು ಟೀಕಿಸಿದರು.
ಗೃಹಸಚಿವರಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಅತ್ಯಾಚಾರಿಗಳನ್ನು ಹಿಡಿಯಬೇಕು. ಅವರಿಗೆ ಶಿಕ್ಷೆ ಕೊಡಬೇಕು ಎಂದು ಹೇಳಬೇಕು. ಅದನ್ನು ಬಿಟ್ಟು ಕಾಂಗ್ರೆಸ್ನವರು ರೇಪ್ ಮಾಡ್ತಾರೆ ಎಂದಿರುವುದು ಸರಿಯಲ್ಲ. ನಾನು ಆರಗ ಜ್ಞಾನೇಂದ್ರ ಬಗ್ಗೆ ಗೌರವ ಇಟ್ಟಿದ್ದೆ, ಗೃಹಸಚಿವರಾಗಿ ಚೆನ್ನಾಗಿ ಕೆಲಸ ಮಾಡ್ತಾರೆ ಅಂದುಕೊಂಡಿದ್ದೆ. ಅವರ ಮನಸ್ಥಿತಿ ಈ ರೀತಿ ಇದೆ ಎಂದು ನಾನು ಅಂದುಕೊಂಡಿರಲಿಲ್ಲ ಹೇಳಿದರು.
ಇದನ್ನೂ ಓದಿ: ಮೈಸೂರು ಸಾಮೂಹಿಕ ಅತ್ಯಾಚಾರ ಕೇಸ್: ಡಿಜಿಪಿಗೆ ತನಿಖೆ ಮೇಲುಸ್ತುವಾರಿ ವಹಿಸಿದ ಸಿಎಂ