ತುಮಕೂರು: ಹಲವು ದಿನಗಳಿಂದ ಉಪಟಳ ನೀಡುತ್ತಿದ್ದ ಚಿರತೆಯೊಂದು ಅರಣ್ಯಾಧಿಕಾರಿಗಳು ಇರಿಸಿದ್ದ ಬೋನಿನಲ್ಲಿ ಸೆರೆಯಾಗಿದೆ.
ಜಿಲ್ಲೆಯ ಮಧುಗಿರಿ ತಾಲೂಕಿನ ಹನುಮಂತಪುರದ ಸುತ್ತಮುತ್ತ ಗ್ರಾಮಗಳಿಗೆ ಚಿರತೆ ಆಹಾರ ಅರಸಿ ನುಗ್ಗಿ ಜಾನುವಾರುಗಳನ್ನು ಕೊಂದುಹಾಕಿತ್ತು. ಅಲ್ಲದೇ ಮನುಷ್ಯರ ಮೇಲೂ ಕೂಡ ದಾಳಿ ನಡೆಸುವ ಪ್ರಯತ್ನ ನಡೆಸಿತ್ತು. ಹೀಗಾಗಿ ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರ ಒತ್ತಾಯ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದ ರವಿಶಂಕರ್ ಎಂಬವರ ತೋಟದಲ್ಲಿ ಬೋನು ಇಟ್ಟಿದ್ದರು.
ಇದೀಗ ಚಿರತೆ ಸೆರೆಯಿಂದ ಸುತ್ತ ಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.