ETV Bharat / city

ಮಹಾನಗರ ಪಾಲಿಕೆ ಕಣ್ಣಿಗೇ ಕಸ ಬಿದ್ದಿದೆಯೇನ್ರೀ.. ನಗರದ ಸ್ವಚ್ಛತೆ ಕಾಪಾಡದಿದ್ರೇ ಗಬ್ಬುನಾರುತ್ತೆ ತುಮಕೂರು - Tumkur city

ತುಮಕೂರು ಮಹಾನಗರ ಪಾಲಿಕೆ ಸ್ವಚ್ಛತೆಗೆ ಸಂಬಂಧಪಟ್ಟಂತೆ ಆನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಆ ಯೋಜನೆಗಳನ್ನು ಯಶಸ್ವಿಗೊಳಿಸುವಲ್ಲಿ ವಿಫಲವಾಗಿದೆ.

ಸ್ವಚ್ಛತೆ ಕಾಪಾಡುವಲ್ಲಿ ಮಹಾನಗರ ಪಾಲಿಕೆ ವಿಫಲ
author img

By

Published : May 31, 2019, 9:45 AM IST

ತುಮಕೂರು: ತಮಕೂರು ನಗರವನ್ನು ಅಭಿವೃದ್ಧಿಗೊಳಿಸುವ ಹಾಗೂ ಸ್ವಚ್ಛವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಜೊತೆಗೆ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಸಹ ಸ್ವಚ್ಛತೆಗೆ ಕೈಜೋಡಿಸಿದೆ. ಆದರೆ, ಯೋಜನೆಗಳು ಯಶಸ್ವಿಯಾಗದೇ ಇರುವುದು ವಿಪರ್ಯಾಸದ ಸಂಗತಿ.

ಸ್ವಚ್ಛತೆ ಕಾಪಾಡುವಲ್ಲಿ ಮಹಾನಗರ ಪಾಲಿಕೆ ವಿಫಲ

ನಗರದಲ್ಲಿ ಹೆಚ್ಚು ಜನ ಸಾಂದ್ರತೆ ಇರುವ ಪ್ರದೇಶಗಳಲ್ಲಿ ಒಣ ಕಸ, ಹಸಿ ಕಸ ಬೇರ್ಪಡಿಸಲು ಮಹಾನಗರ ಪಾಲಿಕೆ ಪ್ರತಿಯೊಂದು ಮನೆಗಳಿಗೆ ಎರಡು ಬಕೆಟ್​ಗಳನ್ನು ನೀಡಿತ್ತು. ಆದರೆ, ಅವುಗಳ ನಿರ್ವಹಣೆ ಮಾತ್ರ ಸರಿಯಾಗಿ ಆಗುತ್ತಿಲ್ಲ. ಈ ಯೋಜನೆ ಕೇವಲ ಕಾಟಾಚಾರಕ್ಕೆ ಎಂಬಂತೆ ಆಗಿದೆ.

ಸ್ಮಾರ್ಟ್ ಸಿಟಿ ವತಿಯಿಂದ ನಗರದ ಟೌನ್​ಹಾಲ್, ಅಮಾನಿಕೆರೆ ಪಾರ್ಕ್, ತುಮಕೂರು ವಿವಿ ಬಳಿ, ಸಿದ್ದಗಂಗಾ ಬಸ್ ಸ್ಟಾಪ್ ಬಳಿ ಹೀಗೆ ಅನೇಕ ಸ್ಥಳಗಳಲ್ಲಿ ಕಸ ಹಾಕಲು ದೊಡ್ಡ ಬಕೆಟ್​ಗಳನ್ನು ಇಡಲಾಗಿದೆ. ಆದರೆ, ಇವುಗಳಲ್ಲಿ ಯಾರೂ ಕಸ ಹಾಕುತ್ತಿಲ್ಲ. ಬದಲಾಗಿ ಎಲ್ಲೆಂದರಲ್ಲಿ ಕಸ ಹಾಕುವುದು ಕಂಡುಬರುತ್ತಿದೆ. ತುಮಕೂರು ವಿವಿ ಬಳಿಯ ಕಸದ ಬಕೆಟ್​ನಲ್ಲಿ ಸರಿಯಾದ ನಿರ್ವಹಣೆ ಕೂಡ ಆಗುತ್ತಿಲ್ಲ. ಕಸದ ಬಕೆಟ್ ತುಂಬಿಹೋಗಿ ಅದರ ಸುತ್ತಲೂ ಪ್ಲಾಸ್ಟಿಕ್ ಕವರ್​ಗಳು ಬಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ.

ಯೋಜನೆಗಳನ್ನು ಜಾರಿಗೆ ತಂದರೆ ಸಾಲದು, ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು. ಆಗ ಮಾತ್ರ ಯೋಜನೆಗಳು ಯಶಸ್ವಿಯಾಗಲು ಸಾಧ್ಯ.

Intro:ತುಮಕೂರು: ತಮಕೂರು ನಗರವನ್ನು ಅಭಿವೃದ್ಧಿಗೊಳಿಸುವ ಹಾಗೂ ಸ್ವಚ್ಛವಾಗಿ ಇಟ್ಟುಕೊಳ್ಳುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಅನೇಕ ಯೋಜನೆಗಳು ಜಾರಿಗೆ ಮುಂದಾಗಿದ್ದು, ಇದರ ಜೊತೆಗೆ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಸಹ ಸ್ವಚ್ಛತೆಗೆ ಕೈಜೋಡಿಸಿದೆ, ಆದರೆ ಯೋಜನೆಗಳು ಯಶಸ್ವಿಯಾಗದೇ ಇರುವುದು ವಿಪರ್ಯಾಸದ ಸಂಗತಿ.

Body:ನಗರದಲ್ಲಿ ಹೆಚ್ಚು ಜನ ಸಾಂದ್ರತೆ ಇರುವ ಪ್ರದೇಶಗಳಲ್ಲಿ ಒಣ ಕಸ, ಹಸಿ ಕಸ ಬೇರ್ಪಡಿಸಲು ಮಹಾನಗರ ಪಾಲಿಕೆ ಮನೆಗಳವರಿಗೆ ಎರಡು ಬಕೆಟ್ ಗಳನ್ನು ನೀಡಿತ್ತು, ಆದರೆ ಅವುಗಳ ನಿರ್ವಹಣೆ ಮಾತ್ರ ಸರಿಯಾಗಿ ಆಗುತ್ತಿಲ್ಲ, ಈ ಯೋಜನೆ ಕೇವಲ ಕಾಟಾಚಾರಕ್ಕೆ ಎಂಬಂತೆ ಆಗಿದೆ.
ಇನ್ನು ಸ್ಮಾರ್ಟ್ ಸಿಟಿ ವತಿಯಿಂದ ನಗರದ ಟೌನ್ ಹಾಲ್, ಅಮಾನಿಕೆರೆ ಪಾರ್ಕ್, ತುಮಕೂರು ವಿವಿ ಬಳಿ, ಸಿದ್ದಗಂಗಾ ಬಸ್ ಸ್ಟಾಪ್ ಬಳಿ ಹೀಗೆ ಅನೇಕ ಸ್ಥಳಗಳಲ್ಲಿ ಕಸ ಹಾಕಲು ದೊಡ್ಡ ಬಕೆಟ್ ಗಳನ್ನು ಇಡಲಾಗಿದೆ, ಆದರೆ ಇವುಗಳಲ್ಲಿ ಯಾರು ಕಸ ಹಾಕುತ್ತಿಲ್ಲ ಬದಲಾಗಿ ಎಲ್ಲೆಂದರಲ್ಲಿ ಕಸ ಹಾಕುವುದು ಕಂಡುಬರುತ್ತಿದೆ. ತುಮಕೂರು ವಿವಿ ಬಳಿ ಇರುವ ಕಸದ ಬಕೆಟ್ ನಲ್ಲಿ ಸರಿಯಾದ ನಿರ್ವಹಣೆ ಆಗುತ್ತಿಲ್ಲ, ಇನ್ನು ಕಸದ ಬಕೆಟ್ ತುಂಬಿಹೋಗಿ ಅದರ ಸುತ್ತಲೂ ಪ್ಲಾಸ್ಟಿಕ್ ಕವರ್ ಗಳು ಬಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ತಿರುಗಿಯೂ ನೋಡಿಲ್ಲ.

Conclusion:ಯೋಜನೆಗಳನ್ನು ಜಾರಿಗೆ ತಂದರೆ ಸಾಲದು ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಆಗ ಮಾತ್ರ ಯೋಜನೆಗಳು ಯಶಸ್ವಿಯಾಗುತ್ತವೆ.

ವರದಿ
ಸುಧಾಕರ

For All Latest Updates

TAGGED:

Tumkur city
ETV Bharat Logo

Copyright © 2025 Ushodaya Enterprises Pvt. Ltd., All Rights Reserved.