ತುಮಕೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ನಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಿ ಬೇಕಾಬಿಟ್ಟಿಯಾಗಿ ಜನರನ್ನು ತುಂಬಿಕೊಂಡು ಪ್ರಯಾಣಿಸಿರುವ ವಿಡಿಯೋ ವೈರಲ್ ಆಗಿದೆ. ಶೇ.50ರಷ್ಟು ಪ್ರಯಾಣಿಕರು ಮಾತ್ರ ಇರಬೇಕು ಅನ್ನೋ ನಿಯಮವನ್ನು ಗಾಳಿಗೆ ತೂರಿ ಬಸ್ ತುಂಬಾ ಪ್ರಯಾಣಿಕರನ್ನು ತುಂಬಿಕೊಂಡು ಹೋಗಲಾಗ್ತಿದೆ.
ಚಿಕ್ಕನಾಯಕನಹಳ್ಳಿ-ತುಮಕೂರು ಮಾರ್ಗವಾಗಿ ಸಂಚರಿಸಿದ KA-06-F1001 ಸಂಖ್ಯೆ ಬಸ್ ಇದಾಗಿದೆ. ಸಾಮಾಜಿಕ ಅಂತರವನ್ನು ಗಾಳಿಗೆ ತೂರಿರುವುದು ಸ್ಪಷ್ಟವಾಗಿದೆ. ಚಾಲಕ, ನಿರ್ವಾಹಕನ ಎಡವಟ್ಟಿಗೆ ಸೋಂಕು ಹರಡುವ ಭೀತಿ ಎದುರಾಗಿದೆ.