ತುಮಕೂರು: ಇತ್ತೀಚೆಗೆ ಬೆಂಗಳೂರಿನ ಪಾದರಾಯನಪುರದ ಕಂಟೈನ್ಮೆಂಟ್ ಝೋನ್ನಿಂದ ಶಿರಾ ನಗರಕ್ಕೆ ಕೊರೊನ ಸೋಂಕಿತ ವ್ಯಕ್ತಿ ಬಂದಿದ್ದ ಹಿನ್ನೆಲೆ, ಶಿರಾ ನಗರದ ಸುತ್ತಲೂ ಮುಂಜಾಗ್ರತಾ ಕ್ರಮ ವಹಿಸಲಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ 48ರ ಸರ್ವೀಸ್ ರಸ್ತೆಗಳ ಮೂಲಕ ಶಿರಾ ನಗರ ಸಂಪರ್ಕಿಸುವ ಎಲ್ಲಾ ರಸ್ತೆಗಳಿಗೆ ಅಡ್ಡಲಾಗಿ ಮಣ್ಣು ಸುರಿಯಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 48ರಿಂದ ಶಿರಾ ನಗರಕ್ಕೆ ಬರುವ ಮಾರ್ಗಗಳನ್ನ ಬಂದ್ ಮಾಡಿದ್ದು, ಬುಕ್ಕಾಪಟ್ಟಣ ರಸ್ತೆಯ ರಿಲಯನ್ಸ್ ಪೆಟ್ರೋಲ್ ಬಂಕ್ ಬಳಿಯಿರುವ ಚೆಕ್ಪೊಸ್ಟ್ ಮೂಲಕ ಮಾತ್ರ ನಗರ ಪ್ರವೇಶಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಈಗಾಗಲೇ ಶಿರಾ ನಗರದಲ್ಲಿ ಮೂವರಿಗೆ ಸೋಂಕು ಕಂಡುಬಂದಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಇನ್ನು, ಬೆಂಗಳೂರಿನ ಪಾದರಾಯನಪುರದಿಂದ ಬಂದಿದ್ದ ಸೋಂಕಿತ ವ್ಯಕ್ತಿಯನ್ನ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.