ETV Bharat / city

ಹಣದಾಸೆಗಾಗಿ ಸಹಕಾರ ಸಂಘದ ಕಾವಲುಗಾರನ ಕೊಲೆ, ಚಿನ್ನಾಭರಣ ಲೂಟಿ

author img

By

Published : Nov 15, 2021, 4:05 PM IST

ತುಮಕೂರು ತಾಲೂಕಿನ ನಾಗವಲ್ಲಿ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯ ಕಾವಲುಗಾರನನ್ನು ಕೊಲೆ ಮಾಡಿದ ದುಷ್ಕರ್ಮಿಗಳು ನಗದು, ಚಿನ್ನಾಭರಣ ಲೂಟಿ ಮಾಡಿದ ಘಟನೆ ಭಾನುವಾರ ರಾತ್ರಿ ನಡೆದಿದೆ.

security murder
ಕಾವಲುಗಾರನ ಕೊಲೆ

ತುಮಕೂರು: ತುಮಕೂರು ತಾಲೂಕಿನ ನಾಗವಲ್ಲಿ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯ ಕಾವಲುಗಾರನನ್ನು ಕೊಲೆ ಮಾಡಿದ ದುಷ್ಕರ್ಮಿಗಳು ನಗದು, ಚಿನ್ನಾಭರಣ ಲೂಟಿ ಮಾಡಿದ ಘಟನೆ ಭಾನುವಾರ ರಾತ್ರಿ ನಡೆದಿದೆ.

ಸಿದ್ದಪ್ಪ (55) ಕೊಲೆಯಾಗಿರುವ ದುರ್ದೈವಿಯಾಗಿದ್ದಾನೆ. ಸಿದ್ದಪ್ಪ ಜೀವನ ಸಾಗಿಸಲು ಕೃಷಿ ಪತ್ತಿನ ಸಹಕಾರ ಸಂಘದ ಕಾವಲುಗಾರನಾಗಿ ಸೇರಿಕೊಂಡಿದ್ದ.

ಸಹಕಾರ ಸಂಘವನ್ನು ಲೂಟಿ ಮಾಡಲು ಹೊಂಚು ಹಾಕಿದ್ದ ದುಷ್ಕರ್ಮಿಗಳು, ಈ ವೇಳೆ ಕಾವಲು ಕಾಯುತ್ತಿದ್ದ ಸಿದ್ದಪ್ಪನನ್ನು ಕೊಲೆ ಮಾಡಿ ಶವವನ್ನು ಸಂಘದ ಕಟ್ಟಡದ ಹಿಂಭಾಗದಲ್ಲಿ ಬಿಸಾಡಿದ್ದಾರೆ.

ಬಳಿಕ ಸಂಘದ ಕಚೇರಿಯ ಬೀಗ ಮುರಿದು ಅಲ್ಲಿದ್ದ ನಗದು, ಚಿನ್ನಾಭರಣವನ್ನು ದೋಚಿದ್ದಾರೆ. ಹಣದ ಆಸೆಗಾಗಿ ಬಡಪಾಯಿ ಕಾವಲುಗಾರ ಸಿದ್ದಪ್ಪನ ಪ್ರಾಣ ಪಕ್ಷಿ ಹಾರಿಹೋಗಿದೆ.

ಘಟನಾ ಸ್ಥಳಕ್ಕೆ ಎಸ್​ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಆರೋಪಿಗಳ ಪತ್ತೆಗೆ ಶ್ವಾನದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.