ETV Bharat / city

ಕಾರುಗಳ ಮುಖಾಮುಖಿ ಡಿಕ್ಕಿ.. ನೋಡ ನೋಡುತ್ತಲೇ ಸುಟ್ಟು ಕರಕಲು! - ಕಾರು ಅಪಘಾತ ಸುದ್ದಿ

ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಗುಬ್ಬಿ ತಾಲೂಕಿನ ಅಣ್ಣಪ್ಪನಹಳ್ಳಿ ಬಳಿ ನಡೆದಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.

car-accident-in-tumkuru-annappanahalli
ಕಾರುಗಳ ಮುಖಾಮುಖಿ ಡಿಕ್ಕಿ
author img

By

Published : Aug 27, 2020, 7:55 PM IST

Updated : Aug 27, 2020, 8:03 PM IST

ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನ ಅಣ್ಣಪ್ಪನಹಳ್ಳಿ ಗ್ರಾಮದ ಬಳಿ ನಿನ್ನೆ ರಾತ್ರಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕಾರು​ಗಳಿಗೆ​ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿವೆ.

ಕಾರುಗಳ ಮುಖಾಮುಖಿ ಡಿಕ್ಕಿ, ಸುಟ್ಟು ಕರಕಲು

ಡೀಗನಹಳ್ಳಿಯ ಹೇಮಂತ್ ಮತ್ತು ದೊಡ್ಡ ಕುನಾಲ್ ಗ್ರಾಮದ ರಾಕೇಶ್ ಎಂಬುವರಿಗೆ ಸೇರಿದ ಕಾರುಗಳು ಸುಟ್ಟು ಭಸ್ಮವಾಗಿವೆ. ಈ ಘಟನೆ ಚೇಳೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಇವೆರಡೂ ಪ್ರವಾಸಿ ನೋಂದಣಿ ಕಾರುಗಳಾಗಿವೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತನಿಖೆ ನಂತರ ತಿಳಿಯಲಿದೆ.

Last Updated : Aug 27, 2020, 8:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.