ತುಮಕೂರು: ಪಿಎಸ್ಐ ಪರೀಕ್ಷೆಯಲ್ಲಿನ ಅಕ್ರಮದ ಕುರಿತು ಕಠಿಣ ಕ್ರಮವನ್ನು ಭಾರತೀಯ ಜನತಾ ಪಕ್ಷ ತೆಗೆದುಕೊಂಡಿದೆ. ಕಠಿಣ ಕ್ರಮವನ್ನು ತೆಗೆದುಕೊಂಡರೆ ಅದು ಹೇಗೆ ಅಪರಾಧವಾಗುತ್ತದೆ. ಕ್ರಮ ತೆಗೆದುಕೊಳ್ಳದಿದ್ದರೆ ತಪ್ಪಾಗುತ್ತಿತ್ತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಅಕ್ರಮದ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಹಾಗೂ ಅದನ್ನು ಮುಚ್ಚಿಹಾಕಿದ್ದರೆ ಅದು ಅಪರಾಧವಾಗುತ್ತಿತ್ತು. ಅಕ್ರಮ ಬೆಳಕಿಗೆ ಬಂದ ತಕ್ಷಣ ಅದರ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿದೆ, ಅದನ್ನು ಮುಚ್ಚಿ ಹಾಕಿಲ್ಲ. ವ್ಯವಸ್ಥೆಯಲ್ಲಿ ಭ್ರಷ್ಟಾಚಾರವನ್ನು ಬಿತ್ತಿದ್ದು, ಬೆಳೆಸಿದ್ದು ಕಾಂಗ್ರೆಸ್ ಪಕ್ಷವಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಅರ್ಕಾವತಿ ಹಗರಣದಲ್ಲಿ ಮಾಡಿದ್ದೇನು?. ಕಳ್ಳತನವಾಗಿದ್ದ ವಾಚನ್ನು ಕಟ್ಟಿಕೊಂಡಿದ್ದು ಯಾರು?. ಪ್ರತಿಪಕ್ಷದ ಯಾರೇ ಇದನ್ನು ಮಾಡಿದ್ದರು ಅವರು ಸುಮ್ಮನಿರುತ್ತಿದ್ದರಾ ಎಂದು ಕಾಂಗ್ರೆಸ್ ನಾಯಕರನ್ನು ಸಿ ರವಿ ಪ್ರಶ್ನಿಸಿದರು.
ಇದನ್ನೂ ಓದಿ: ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಆರೋಪ: ರವೀಂದ್ರ ಹಾರೋಹಳ್ಳಿ ಬಂಧನ