ತುಮಕೂರು : ನಾಳೆ ಬ್ರಕೀದ್ ಹಬ್ಬ ಹಿನ್ನೆಲೆಯಲ್ಲಿ ಮಾಂಸಕ್ಕಾಗಿ ಗೋವುಗಳನ್ನು ಕಡಿಯಲು ಯತ್ನಿಸಿದ ಮೂವರನ್ನು ಕುಣಿಗಲ್ ಪೊಲೀಸರು ಬಂಧಿಸಿರುವ ಘಟನೆ ತುಮಕೂರು ಜಿಲ್ಲೆ ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಮೃತೂರು ಸಮೀಪದ ಬಿಸಿನೆಲೆ ಅರಣ್ಯ ಪ್ರದೇಶದಲ್ಲಿ 15 ಹಸುಗಳು ಹಾಗೂ 13 ಕೋಣಗಳನ್ನು ತೆಗೆದುಕೊಂಡು ಹೋಗಿ ಅವುಗಳನ್ನು ಹತ್ಯೆ ಮಾಡಲು ಯತ್ನಿಸಿದ್ದರು.
ಈ ವಿಚಾರ ತಿಳಿಯುತ್ತಿದ್ದಂತೆ ಡಿವೈಎಸ್ಪಿ ನೇತೃತ್ವದಲ್ಲಿ ರಮೇಶ್ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಗುರುಪ್ರಸಾದ್ ತಂಡ ನೇತೃತ್ವದಲ್ಲಿ ದಾಳಿ ನಡೆಸಿ, 15 ಹಸುಗಳು ಹಾಗೂ 13 ಕೋಣಗಳನ್ನು ರಕ್ಷಿಸಿದೆ. ಪೊಲೀಸರು ಸ್ಥಳಕ್ಕೆ ಧಾವಿಸುವ ವೇಳೆಗಾಗಲೇ ಒಂದು ಹಸು ವಧೆ ಮಾಡಿ ಮಾಂಸವನ್ನು ತುಂಡು ತುಂಡಾಗಿಸಿದ್ದರು.
ಗೋವುಗಳನ್ನು ಕಡಿಯುತ್ತಿದ್ದ ಜಗದೀಶ್, ಮಂಜುನಾಥ್ ಹಾಗೂ ಶಿವು ಎಂಬ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಜಾನುವಾರುಗಳನ್ನು ಸಾಗಿಸಲು ಬಳಸಿದ್ದ ಒಂದು ಟಾಟಾ ಏಸ್ ಹಾಗೂ ಎರಡು ಬೈಕ್‌ಗಳ ಜೊತೆಗೆ ಹಸುವಿನ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಬಕ್ರೀದ್ ಹಬ್ಬಕ್ಕೆ ಸಿದ್ಧತೆ.. ಕಲಬುರಗಿಯ ಬಕ್ರಾ ಮಾರ್ಕೆಟ್ನಲ್ಲಿ ಆಡು, ಮೇಕೆ, ಕುರಿ ಖರೀದಿ ಭರ್ಜರಿ