ತುಮಕೂರು : ಜಿಲ್ಲೆಯ ಪಾವಗಡದಲ್ಲಿ ಜೂಜು ಅಡ್ಡೆ ನಡೆಸುತ್ತಿದ್ದ ನಾಲ್ವರು ದಂಧೆಕೋರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಎಸ್ ಪಿ ವಂಶಿಕೃಷ್ಣ, ಜೂಜು ಅಡ್ಡೆ ನಡೆಸುತ್ತಿದ್ದ ಕಿಂಗ್ಪಿನ್ ಗಂಗಾಧರ ಸ್ವಾಮಿ ಸೇರಿದಂತೆ ನಾಲ್ವರನ್ನು ವಿಚಾರಣೆಗೆ ಒಳಪಡಿಲಾಗುವುದು. ದಂಧೆ ನಡೆಯುತ್ತಿದ್ದ ವೇಳೆ ಇಬ್ಬರು ಪೇದೆಗಳು ಸ್ಥಳದಲ್ಲಿದ್ದ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋ ಆಧರಿಸಿ ಶೈಲಾಪುರ ಬೀಟ್ ಪೊಲೀಸ್ ಮಂಜುನಾಥ್ ಹಾಗೂ ಎಸ್ ಬಿ ಕಾನ್ಸ್ಸ್ಟೇಬಲ್ ಉಮೇಶ್ರನ್ನು ಅಮಾನತುಗೊಳಿಸುವಂತೆ ಆದೇಶಿಸಲಾಗಿದೆ. ಅಕ್ರಮ ದಂಧೆಗೆ ಸಂಪೂರ್ಣ ಬ್ರೇಕ್ ಹಾಕಲು ವಿಶೇಷ ತಂಡ ರಚಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.