ETV Bharat / city

ತುಮಕೂರು: ಕೊಲೆ ಮಾಡಿ ಶವ ಕೆರೆಗೆ ಎಸೆದು ಪರಾರಿಯಾಗಿದ್ದ ಆರೋಪಿಗಳಿಬ್ಬರು ಅರೆಸ್ಟ್​

ವ್ಯಕ್ತಿಯೊಬ್ಬರ ಗುಪ್ತಾಂಗಕ್ಕೆ ಮಾರಕಾಸ್ತ್ರಗಳಿಂದ ಹೊಡೆದು ಕುತ್ತಿಗೆ ಕೊಯ್ದು ಶವವನ್ನು ಕೆರೆಗೆ ಎಸೆದು ಪರಾರಿಯಾಗಿದ್ದ ಆರೋಪಿಗಳಿಬ್ಬರನ್ನು ಹುಲಿಯೂರುದುರ್ಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹುಲಿಯೂರುದುರ್ಗ ಪೊಲೀಸ್​ ಠಾಣೆ
ಹುಲಿಯೂರುದುರ್ಗ ಪೊಲೀಸ್​ ಠಾಣೆ
author img

By

Published : Jan 28, 2022, 2:12 PM IST

ತುಮಕೂರು: ಒಬ್ಬನನ್ನು ಕೊಲೆ ಮಾಡಿ ಶವವನ್ನು ಕೆರೆಗೆ ಎಸೆದು ಪರಾರಿಯಾಗಿದ್ದ ಆರೋಪಿಗಳಿಬ್ಬರನ್ನು ಹುಲಿಯೂರುದುರ್ಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಜಯಕುಮಾರ್ ಮತ್ತು ಗಂಗರಾಜ ಬಂಧಿತ ಆರೋಪಿಗಳು. ಇವರಿಬ್ಬರು ಕುಣಿಗಲ್ ತಾಲೂಕಿನ ಬಿ ಹೊಸಳ್ಳಿ ಗ್ರಾಮದ ಆಂಜನಪ್ಪ (58) ಎಂಬಾತನನ್ನು ಕೊಲೆ ಮಾಡಿ ಪರಾರಿಯಾಗಿದ್ದರು.

ಈ ಮೂವರು ಮದ್ಯ ಸೇವಿಸಿ ಆಮ್ಲೆಟ್ ತಿನ್ನುತ್ತಿದ್ದ ವೇಳೆ ಆಂಜನಪ್ಪ ಮತ್ತು ಗಂಗರಾಜು ನಡುವೆ ಜಗಳ ನಡೆದಿದೆ. ಈ ವೇಳೆ, ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿದ್ದು, ಗಂಗರಾಜುಗೆ ಆಂಜನಪ್ಪ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ನಂತರ ಅಲ್ಲಿಂದ ತಪ್ಪಿಸಿಕೊಂಡು ಬಂದ ಗಂಗರಾಜು, ಹುಲಿಯೂರುದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದನು.

ಇದೇ ಸಿಟ್ಟಿನಿಂದ ಗಂಗರಾಜು ತನ್ನ ಸ್ನೇಹಿತ ವಿಜಯಕುಮಾರನೊಂದಿಗೆ ಸೇರಿ ಗ್ರಾಮಕ್ಕೆ ಸೈಕಲ್​ನಲ್ಲಿ ತೆರಳುತ್ತಿದ್ದ ಆಂಜನಪ್ಪ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೇ, ಆಂಜನಪ್ಪನ ಗುಪ್ತಾಂಗಕ್ಕೆ ಮಾರಕಾಸ್ತ್ರಗಳಿಂದ ಹೊಡೆದು ಕುತ್ತಿಗೆ ಕೊಯ್ದು ದ್ವಿಚಕ್ರವಾಹನದಲ್ಲಿ ತೆಗೆದುಕೊಂಡು ದೀಪಾಂಬುದಿ ಕೆರೆಗೆ ಬಿಸಾಡಿ ಪರಾರಿಯಾಗಿದ್ದರು. ಈ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.