ತುಮಕೂರು: ನಗರದ ಟೌನ್ ಹಾಲ್ ವೃತ್ತದಲ್ಲಿ ಟ್ರಾಫಿಕ್ ಪೊಲೀಸ್ ಕೂರುವ ಕುರ್ಚಿಯಲ್ಲಿ ಖಾವಿಧಾರಿವೋರ್ವ ಕುಳಿತು ಮಂಗನಾಟ ಪ್ರದರ್ಶಿಸಿದ ಘಟನೆ ನಡೆದಿದೆ.
ಶನಿವಾರ ಮಧ್ಯಾಹ್ನ ಸುಮಾರು ಒಂದೂವರೆ ಗಂಟೆಗಳ ಕಾಲ ಈ ಖಾವಿಧಾರಿ ಕೂಲಿಂಗ್ ಗ್ಲಾಸ್ ಹಾಗೂ ಕೊರಳಲ್ಲಿ ವಿಸಿಲ್ ಹಾಕಿಕೊಂಡು ಟ್ರಾಫಿಕ್ ಕಂಟ್ರೋಲ್ ಮಾಡುತ್ತಿದ್ದ. ಈತನ ವಿಸಿಲ್ಗೆ ವಾಹನ ಸವಾರರು ಕಂಗಾಲಾಗಿದ್ದರು. ಇನ್ನೂ ಕೆಲವರು ಈತನ ವೇಷಭೂಷಣವನ್ನು ಕಂಡು ನಗುತ್ತಾ ಮುಂದೆ ಸಾಗುತ್ತಿದ್ದರು. ನನ್ನ ಹೆಸರು ವಿಠಲ್ ರಾವ್, ನಾನು ರೈಲ್ವೆ ಇಲಾಖೆಯಲ್ಲಿ ಈ ಹಿಂದೆ ಡ್ರೈವರ್ ಆಗಿ ಕೆಲಸ ಮಾಡಿದ್ದೆ ಎಂದು ಹೇಳುತ್ತಾ ವಿಚಿತ್ರವಾಗಿ ವರ್ತಿಸುತ್ತಿದ್ದ ಈ ವ್ಯಕ್ತಿ.
ಇನ್ನೊಂದೆಡೆ ಟೌನ್ ಹಾಲ್ ವೃತ್ತದ ನಾಲ್ಕು ದಿಕ್ಕುಗಳಲ್ಲಿ ಸಿಸಿಟಿವಿಗಳಿದ್ದರೂ ಈತನ ಮಂಗನಾಟವನ್ನು ಕಂಟ್ರೋಲ್ ರೂಂನಲ್ಲಿದ್ದ ಪೊಲೀಸ್ ಸಿಬ್ಬಂದಿ ಗಮನಿಸದಿರುವುದು ಅಚ್ಚರಿ ಮೂಡಿಸಿತ್ತು.