ತುಮಕೂರು: ಸಾಮಾನ್ಯವಾಗಿ ಹಸುಗಳು ಒಂದು ಕರುಗೆ ಜನ್ಮ ನೀಡುವುದನ್ನು ಕಂಡಿದ್ದೇವೆ, ಕೇಳಿದ್ದೇವೆ. ಆದರೆ ತುಮಕೂರು ಜಿಲ್ಲೆಯಲ್ಲಿ ಹಸುವೊಂದು ಮೂರು ಕರುಗಳಿಗೆ ಜನ್ಮ ನೀಡಿದೆ.
ಮಧುಗಿರಿ ತಾಲೂಕಿನ ತಾಡಿ ಗ್ರಾಮದ ಲಕ್ಷ್ಮಿನಾರಾಯಣಪ್ಪ ಎಂಬುವರಿಗೆ ಸೇರಿದ ಹಸು ಮೂರು ಕರುಗಳಿಗೆ ಜನ್ಮ ನೀಡಿದ್ದು, ಅಚ್ಚರಿಗೆ ಕಾರಣವಾಗಿದೆ. ಹಸು ಹಾಗೂ ಮೂರು ಕರುಗಳು ಆರೋಗ್ಯಕರವಾಗಿವೆ.