ETV Bharat / city

ಕೊರೊನಾ ಚಿಕಿತ್ಸೆ ನೀಡಿದ ಆಸ್ಪತ್ರೆ ಸಿಬ್ಬಂದಿ ಕಂಡು ಕಣ್ಣೀರು ಹಾಕಿದ ಮಹಿಳೆ...

ಕೊರೊನಾ ಸೋಂಕಿನಿಂದ ಆಸ್ಪತ್ರೆ ಸೇರಿ ಗುಣಮುಖರಾಗಿ ಇಂದು ಮನೆಗೆ ತೆರಳುತ್ತಿದ್ದ ಮಹಿಳೆಯರಲ್ಲಿ ಒಬ್ಬರು ವೈದ್ಯಕೀಯ ಸಿಬ್ಬಂದಿಗೆ ಕೈಮುಗಿದು ಕಣ್ಣೀರು ಹಾಕಿದ ಪ್ರಸಂಗ ನಡೆಯಿತು. ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿ ಮಹಿಳೆಗೆ ಧೈರ್ಯ ತುಂಬಿ ಕಳುಹಿಸಿದರು.

a-corona-patient-cried-after-discharged
ತುಮಕೂರು ಜಿಲ್ಲಾ ಕೋವಿಡ್ ಆಸ್ಪತ್ರೆ
author img

By

Published : Jul 16, 2020, 6:46 PM IST

Updated : Jul 16, 2020, 7:55 PM IST

ತುಮಕೂರು: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಇಂದು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬರು ವೈದ್ಯಕೀಯ ಸಿಬ್ಬಂದಿಯ ಎದುರು ಕಣ್ಣೀರು ಹಾಕಿದ ಘಟನೆ ನಡೆಯಿತು.

ಆಸ್ಪತ್ರೆ ಸಿಬ್ಬಂದಿ ಕಂಡು ಕಣ್ಣೀರು ಹಾಕಿದ ಮಹಿಳೆ

108 ಆ್ಯಂಬುಲೆನ್ಸ್​ನಲ್ಲಿ ಗುಣಮುಖರಾಗಿದ್ದ ಇಬ್ಬರು ಮಹಿಳೆಯರನ್ನು ಮನೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ತಮಗೆ ಎದುರಾದ ಜಿಲ್ಲಾಸ್ಪತ್ರೆಯ ನರ್ಸ್​ ಅವರನ್ನು ಕಂಡು ಗುಣಮುಖರಾದ ಮಹಿಳೆ ಕೈಮುಗಿದು ಕಣ್ಣೀರು ಹಾಕಿದರು. ಈ ವೇಳೆ ವೈದ್ಯಕೀಯ ಸಿಬ್ಬಂದಿಯು ಮಹಿಳೆಗೆ ಕಣ್ಣೀರು ಹಾಕಬೇಡಿ ಎಂದು ಸಂತೈಸಿದರು. ಅಲ್ಲದೆ ಯಾವುದೇ ರೀತಿಯ ಭಯ ಪಡಬೇಡಿ ಎಂದು ಧೈರ್ಯ ತುಂಬಿ ಬೀಳ್ಕೊಟ್ಟರು.

ಗುಣಮುಖರಾಗಿದ್ದ ಮಹಿಳೆಯರನ್ನು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಸಿಬ್ಬಂದಿ, ಅಗತ್ಯ ಮುನ್ನೆಚ್ಚರಿಕಾ ಕಿಟ್​​ಗಳನ್ನು ಧರಿಸಿದ್ದರು. ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸಾ ಸೌಲಭ್ಯವನ್ನು ನೀಡಲಾಯಿತು. ವೈದ್ಯರ ಸೇವೆಗೆ ಗುಣಮುಖರಾದವರು ಕೃತಜ್ಞತೆ ಸಲ್ಲಿಸಿದರು.

Last Updated : Jul 16, 2020, 7:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.