ತುಮಕೂರು: ಕೆರೆಯಲ್ಲಿ ಕುರಿಗಳನ್ನು ತೊಳೆಯುತ್ತಿದ್ದಾಗ ನೀರಿನಲ್ಲಿ ಮುಳುಗಿ ಕುರಿಗಾಹಿ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಶಿರಾ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ನಾಗರಾಜು(38), ಪತ್ನಿ ಮಮತ( 35) ಹಾಗೂ ಮಗ ಕಿರಣ್ (14) ಎಂದು ಗುರುತಿಸಲಾಗಿದೆ.
ನಾಗರಾಜು ಸುಮಾರು 30 ಕುರಿಗಳನ್ನು ಸಾಕಿದ್ದಾರೆ. ಈ ಕೊಬ್ಬಿದ ಕುರಿಗಳನ್ನು ತೊಳೆಯಲು ಹೊಸೂರು ಕೆರೆಯಲ್ಲಿ ಸ್ವಲ್ಪ ಆಳದವರೆಗೂ ಕರೆದುಕೊಂಡು ಹೋಗಿದ್ದಾರೆ. ನಂತರ ಅವುಗಳನ್ನು ದಡಕ್ಕೆ ಕರೆದುಕೊಂಡು ಬರುವ ಸಂದರ್ಭದಲ್ಲಿ ಕುರಿಗಳು ನಾಗರಾಜು ಅವರನ್ನೇ ನೀರಿಗೆ ವಾಪಸ್ ಎಳೆದಿವೆ. ಈಜು ಬಾರದ ನಾಗರಾಜ್ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಅಲ್ಲಿಯೇ ಇದ್ದ ಅವರ ಪತ್ನಿ ಮತ್ತು ಮಗ ಪಾರು ಮಾಡಲು ಹೋಗಿ ಅವರೂ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.
ತಾವರೆಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.