ETV Bharat / city

ಬೆಳಕಿಗೆ ಬಂದ 2 ವರ್ಷ ಹಳೆಯ ಮನೆಗಳ್ಳತನ ಪ್ರಕರಣ: ಬೆರಳಚ್ಚಿನಿಂದ ಅಪ್ಪ-ಮಗನ ಕಳ್ಳಾಟ ಪತ್ತೆ! - Cholagudda of Chitradurga

ಎರಡು ವರ್ಷಗಳಿಂದ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸುತ್ತಿದ್ದ ಚಾಲಾಕಿ ಅಪ್ಪ-ಮಗನ ಮನೆಗಳ್ಳತನ ಪ್ರಕರಣ ಬೇಧಿಸುವಲ್ಲಿ ತುಮಕೂರು ಪೊಲೀಸರು ಯಶಸ್ವಿಯಾಗಿದ್ದಾರೆ.

tumakuru
ಕಳ್ಳತನ ಭೇದಿಸುವಲ್ಲಿ ಯಶಸ್ವಿಯಾದ ತಂಡ
author img

By

Published : Dec 24, 2019, 9:50 PM IST

Updated : Dec 25, 2019, 7:19 AM IST

ತುಮಕೂರು: ಎರಡು ವರ್ಷಗಳಿಂದ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸುತ್ತಿದ್ದ ಚಾಲಾಕಿ ಅಪ್ಪ-ಮಗನ ಮನೆಗಳ್ಳತನ ಪ್ರಕರಣ ಬೇಧಿಸುವಲ್ಲಿ ತುಮಕೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳ್ಳತನ ಭೇದಿಸುವಲ್ಲಿ ಯಶಸ್ವಿಯಾದ ತಂಡ

ಚಿತ್ರದುರ್ಗದ ಚೋಳಗುಡ್ಡದ ಮಂಜಪ್ಪ ಮತ್ತು ಆತನ ಮಗ ಸೋಮಶೇಖರ್ ಮನೆಗಳ್ಳನ ಮಾಡುತ್ತಿದ್ದವರು ಎಂದು ಪತ್ತೆಯಾಗಿದೆ. 2017ರ ಜುಲೈ 24ರಂದು ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದ ಕೃಷ್ಣಾಚಾರ್ ಎಂಬುವರ ಮನೆ ಕಳ್ಳತನವಾಗಿತ್ತು. ಮನೆ ಬೀಗ ಒಡೆದು ಬೀರುವಿನಲ್ಲಿದ್ದ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಲಾಗಿತ್ತು.

ಈ ಸಂಬಂಧ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸತತ ಪ್ರಯತ್ನದ ನಂತರವೂ ಪೊಲೀಸರಿಗೆ ಪ್ರಕರಣ ಬೇಧಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಆರೋಪಿ ಮತ್ತು ಮಾಲು ಪತ್ತೆಯಾಗದ ಕಾರಣ ನ್ಯಾಯಾಲಯಕ್ಕೆ ಪೊಲೀಸರು ವರದಿ ಸಲ್ಲಿಸಿದ್ದರು. ಈ ಪ್ರಕರಣ ಕುರಿತಂತೆ ಹಲವು ಬಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕ್ರೈಂ ಸಭೆಯಲ್ಲಿ ಚರ್ಚಿಸಲಾಗಿತ್ತು.

ಆಕಸ್ಮಿಕ ಬೆರಳಚ್ಚಿನ ಮೂಲಕ ಬೆಳಕಿಗೆ ಬಂತು ಅಪ್ಪ-ಮಗನ ಕಳ್ಳಾಟ...

ಬೆರಳಚ್ಚು ತಜ್ಞರಿಗೆ ಕೃತ್ಯ ನಡೆದ ಸ್ಥಳದಲ್ಲಿ ದೊರೆತ ಆಕಸ್ಮಿಕ ಬೆರಳಚ್ಚು ಎರಡು ವರ್ಷಗಳ ಹಳೆಯ ಪ್ರಕರಣವನ್ನು ಬೇಧಿಸುವಲ್ಲಿ ಸಹಕಾರಿಯಾಗಿದೆ. ಆ ಬೆರಳಚ್ಚನ್ನು ನೂತನ ಎಎಫ್​ಐಎಸ್ ತಂತ್ರಾಂಶದಲ್ಲಿ ಮರು ಶೋಧಿಸಲಾಗಿತ್ತು. ಇದು ಈ ಹಿಂದೆ ಇದೇ ಪ್ರಕರಣದ ಅನುಮಾನಿತ ಆರೋಪಿಯಾಗಿದ್ದ ಸೋಮಶೇಖರ್ ಎಂಬಾತನದ್ದು ಎಂಬುದು ಸ್ಪಷ್ಟವಾಗಿದೆ.

ಈ ಪ್ರಕರಣದಲ್ಲಿ ಆರೋಪಿ ಸೋಮಶೇಖರ್​ನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಸತತ ವಿಚಾರಣೆ ನಡೆಸಿದ್ದಾರೆ. ಆಗ ಆತ ತನ್ನ ತಂದೆ ಮಂಜಪ್ಪನಿಗೆ ಚಿನ್ನಾಭರಣವನ್ನು ಕೊಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ. ಇಬ್ಬರೂ ಸೇರಿ ಚಿತ್ರದುರ್ಗ ನಗರದ ಶಿಕ್ಷಕನೊಬ್ಬನ ಮೂಲಕ ಚಿತ್ರದುರ್ಗ ನಗರದ ಮಣಪ್ಪುರಂ ಫೈನಾನ್ಸ್, ಪ್ರಗತಿ ಗ್ರಾಮೀಣ ಬ್ಯಾಂಕ್​ನಲ್ಲಿ ಚಿನ್ನಾಭರಣಗಳನ್ನು ಅಡ ಇರಿಸಿದ್ದರು ಹಾಗೂ ಜ್ಯುಯಲರ್ಸ್​ಗೆ ಮಾರಾಟ ಮಾಡಿದ್ದರಂತೆ. ಪೊಲೀಸರು 20 ಲಕ್ಷ ರೂಪಾಯಿ ಮೌಲ್ಯದ 576 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ. ಮಂಜಪ್ಪ ಈಗಾಗಲೇ ಬೇರೊಂದು ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

Intro:Body:ಬೆಳಕಿಗೆ ಬಂತು 2 ವಷಱಗಳ ಹಳೆಯ ಮನೆಗಳ್ಳತನ ಪ್ರಕರಣ....
ಅಪ್ಪ, ಮಗನ ಕಳ್ಳಾಟಕ್ಕೆ ಬ್ರೇಕ್ ಹಾಕಿ ಪೊಲೀಸರು…..

ತುಮಕೂರು
ಎರಡು ವಷಱಗಳಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಅಪ್ಪ ಮಗನ ಚಾಲಾಕಿ ಮನೆಗಳ್ಳತನ ಪ್ರಕರಣಕ್ಕೆ ತುಮಕೂರು ಪೊಲೀಸರು ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದುಗಱದ ಚೋಳಗುಡ್ಡದ ಮಂಜಪ್ಪ ಮತ್ತು ಆತನ ಮಗ ಸೋಮಶೇಖರ್ ಮನೆಗಳ್ಳನ ಮಾಡುತ್ತಿದ್ದ ಎಂಬುದು ಪತ್ತೆಯಾಗಿದೆ.
2017ರ ಜುಲೈ24ರಂದು ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದ ಕೃಷ್ಣಾಚಾರ್ ಎಂಬುವರ ಮನೆ ಕಳ್ಳತನವಾಗಿತ್ತು. ಮನೆ ಬೀಗ ಒಡೆದು ಬೀರುವಿನಲ್ಲಿದ್ದ 20ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಲಾಗಿತ್ತು. ಈ ಸಂಬಂಧ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸತತ ಪ್ರಯತ್ನದ ನಂತರವೂ ಪೊಲೀಸರಿಗೆ ಪ್ರಕರಣ ಬೇಧಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಆರೋಪಿ ಮತ್ತು ಮಾಲು ಪತ್ತೆಯಾಗದ ಕಾರಣ ಎಂದು ನ್ಯಾಯಾಲಯಕ್ಕೆ ಪೊಲೀಸರು ವರದಿಯನ್ನು ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಕುರಿತಂತೆ ಹಲವು ಬಾರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕ್ರೈಂ ಸಭೆಯಲ್ಲಿ ಚಚಿಱಸಲಾಗಿತ್ತು.

ಆಕಸ್ಮಿಕ ಬೆರಳುಮುದ್ರೆ ಮೂಲ್ಕ ಬೆಳಕಿಗೆ ಬಂತು ಅಪ್ಪಮಗನ ಕಳ್ಳಾಟ…..
ಬೆರಳುಮುದ್ರೆ ತಜ್ಞರಿಗೆ ಕೃತ್ಯ ನಡೆದ ಸ್ಥಳದಲ್ಲಿ ದೊರೆತ ಆಕಸ್ಮಿಕ ಬೆರಳು ಮುದ್ರೆ ಎರಡು ವಷಱಗಳ ಹಳೆಯ ಪ್ರಕರಣವನ್ನು ಬೇಧಿಸುವಲ್ಲಿ ಸಹಕಾರಿಯಾಗಿದೆ. ಆ ಬೆರಳು ಮುದ್ರೆಯನ್ನು ನೂತನ ಎಎಫ್ ಐಎಸ್ ತಂತ್ರಾಂಶದಲ್ಲಿ ಮರು ಶೋಧಿಸಲಾಗಿತ್ತು. ಆಕಸ್ಮಿಕ ಬೆರಳು ಮುದ್ರೆಯು ಪೂವಱ ಈ ಹಿಂದೆ ಇದೇ ಪ್ರಕರಣದ ಅನುಮಾನಿತ ಆರೋಪಿಯಾಗಿದ್ದ ಸೋಮಶೇಖರ್ ಎಂಬಾತನದ್ದು ಎಂಬುದು ಸ್ಪಷ್ಟವಾಗಿದೆ.
ಈ ಪ್ರಕರಣದಲ್ಲಿ ಆರೋಪಿ ಸೋಮಶೇಖರ್ ನನ್ನು ವಶಕ್ಕೆ ತೆಗೆದುಕೊಂಡು ಪೊಲೀಸರು ಸತತ ವಿಚಾರಣೆ ನಡೆಸಿದ್ದಾರೆ. ತನ್ನ ತಂದೆ ಮಂಜಪ್ಪ ನಿಗೆ ಚಿನ್ನಾಭರಣವನ್ನು ಕೊಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ. ಇಬ್ಬರೂ ಸೇರಿ ಚಿತ್ರದುಗಱ ನಗರದ ಶಿಕ್ಷಕನೊಬ್ಬನ ಮೂಲ್ಕ ಚಿತ್ರದುಗಱ ನಗರ ಮಣಪ್ಪುರಂ ಫೈನಾನ್ಸ್ , ಪ್ರಗತಿ ಗ್ರಾಮೀಣ ಬ್ಯಾಂಕ್ ನಲ್ಲಿ ಚಿನ್ನಾಭರಣಗಳನ್ನು ಅಡ ಇರಿಸಿದ್ದರು. ಉತ್ಸವಾಂಬ ಜ್ಯುಯಲರ್ಸ್ ಗೆ ಮಾರಾಟ ಮಾಡಿದ್ದರು. ಪೊಲೀಸರು 20ಲಕ್ಷ ರೂ. ಮೌಲ್ಯದ 576 ಗ್ರಾಂ ಚಿನ್ನಾಭರಣ ವಶಕ್ಕೆ ತೆಗೆದುಕೊಂಡಿದ್ದಾರೆ. ಮಂಜಪ್ಪ ಈಗಾಗಲೇ ಬೇರೊಂದು ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಬೈಟ್ : ಕೋ. ನ. ವಂಶಿ ಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ….
Conclusion:
Last Updated : Dec 25, 2019, 7:19 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.