ಶಿವಮೊಗ್ಗ: ಮನಸ್ಸಿಗೆ ಬಲ ನೀಡುವ ವಿದ್ಯೆ ಯೋಗ. ಅದನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ್ದು, ಭಾರತ ಎಂದು ಅವದೂತ ವಿನಯ್ ಗುರೂಜಿ ಹೇಳಿದರು. ನಗರದ ನೆಹರು ಸ್ಟೇಡಿಯಂನಲ್ಲಿ ಯೋಗ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬ್ರಹ್ಮ ಜ್ಞಾನವನ್ನು ವಿಶ್ವಕ್ಕೆ ಕೊಡುವ ಮೂಲಕ ಭಾರತ ಜಗತ್ತನ್ನು ಬದಲಿಸಲು ಹೊರಟಿದೆ. ಮನಸ್ಸಿಗೆ ಬಲ ಇಲ್ಲದಾಗ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಹಾಗಾಗಿ ಮನುಷ್ಯನಿಗೆ ಮನಸ್ಸಿನ ಬಲ ಬೇಕು ಎಂದರೆ ಯೋಗ ಮಾಡಬೇಕು. ಅಲ್ಲದೇ ಆಲೋಚನೆಗಳನ್ನು ಸರಿ ಪಡಿಸಲು ಸಹ ಯೋಗ ಬೇಕು ಎಂದರು.
ಬಳಿಕ ಮಾತನಾಡಿದ ಮಾಜಿ ಸಚಿವ ಈಶ್ವರಪ್ಪ, ಇಡೀ ವಿಶ್ವವನ್ನು ಪ್ರಧಾನಿಗಳು ಯೋಗದ ಮೂಲಕ ಸೇರಿಸಿ ಸಮಾಜ ಜೋಡಿಸುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಸಾಧಕರಾದ ಡಿ.ಹೆಚ್ ಶಂಕರಮೂರ್ತಿ, ಬಾ.ಮಾ ಶ್ರೀಕಂಠ, ಭಾ.ಸು ಅರವಿಂದ್ ಅವರಿಗೆ ಸನ್ಮಾನಿಸಲಾಯಿತು. ಸಂಸದ ಬಿ.ವೈ ರಾಘವೇಂದ್ರ, ಮೇಯರ್ ಸುನೀತಾ ಅಣ್ಣಪ್ಪ ಸೇರಿದಂತೆ ನೂರಾರು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ