ಶಿವಮೊಗ್ಗ: ಇಲ್ಲಿನ ರಂಗಾಯಣದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಸ್ಮಾರ್ಟ್ ಸಿಟಿ ಮತ್ತು ಚಿತ್ರಕಲಾ ಪರಿಷತ್ ಬೆಂಗಳೂರು ಇವರ ಸಹಯೋಗದೊಂದಿಗೆ ನಿರ್ಮಿಸಲಾಗಿರುವ ಭಿತ್ತಿ ಚಿತ್ರಗಳ ಗ್ಯಾಲರಿ ಜನರನ್ನು ಆಕರ್ಷಿಸುತ್ತಿದೆ.
ಒಟ್ಟು 40ಕ್ಕೂ ಅಧಿಕ ಭಿತ್ತಿಚಿತ್ರ ಕಲಾಕೃತಿಗಳನ್ನು ಶಿವಮೊಗ್ಗ ರಂಗಾಯಣದ ಆವರಣದಲ್ಲಿ ಅನಾವರಣಗೊಳಿಸಲಾಗಿದೆ. ಸೂತ್ರದ ಬೊಂಬೆಯಾಟದ ಕಲೆಯನ್ನೂ ಈ ಭಿತ್ತಿಚಿತ್ರಗಳಲ್ಲಿ ತೋರಿಸಲಾಗಿದೆ. ಅಲ್ಲದೇ, ಕನ್ನಡದ 10ಕ್ಕೂ ಪ್ರಸಿದ್ಧ ನಾಟಕಗಳಾದ 'ಚಾಣಕ್ಯ ಪ್ರಪಂಚ', 'ಸಾಹೇಬರು ಬರುತ್ತಾರೆ', 'ಸಾಮ್ರಾಟ ಅಶೋಕ' ಸೇರಿದಂತೆ ಹಲವಾರು ನಾಟಕಗಳ ದೃಶ್ಯಾವಳಿಗಳನ್ನು ಇಲ್ಲಿ ಕಾಣಬಹುದು.
ಇದನ್ನೂ ಓದಿ: ದೆಹಲಿಯಲ್ಲಿ ಪೆಟ್ರೋಲ್ ದರ 8 ರೂಪಾಯಿ ಇಳಿಕೆ.. ಮಧ್ಯರಾತ್ರಿಯಿಂದಲೇ ಜಾರಿ..
ಕನ್ನಡ ಅನೇಕ ಕಲಾ ಪ್ರಕಾರಗಳನ್ನು ರಂಗಾಯಣ ಆವರಣದಲ್ಲಿ ಅನಾವರಣ ಮಾಡಲಾಗಿದೆ. ಈ ಅಪರೂಪದ ಕಲಾಕೃತಿಗಳನ್ನು ಸಾರ್ವಜನಿಕರ ವೀಕ್ಷಣೆಗೆ ನಿತ್ಯವೂ ಅವಕಾಶ ಮಾಡಿಕೊಡಲಾಗಿದೆ. 20 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ 40ಕ್ಕೂ ಅಧಿಕ ಭಿತ್ತಿಚಿತ್ರಗಳ ಕಲಾ ಗ್ಯಾಲರಿ ನೋಡುಗರ ಕಣ್ಮನ ಸೆಳೆಯುತ್ತಿದೆ.