ಶಿವಮೊಗ್ಗ: ಬೆಳ್ಳಂಬೆಳಗ್ಗೆ ಟಿಪ್ಪರ್ ಲಾರಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಮಾಚೇನಹಳ್ಳಿ ನಡೆದಿದೆ.
![Travelers died in road accident at Shivamogga, Shivamogga crime news, Car and lorry collide in Shivamogga, ಶಿವಮೊಗ್ಗದ ರಸ್ತೆ ಅಪಘಾತದಲ್ಲಿ ಪ್ರಯಾಣಿಕರು ಸಾವು, ಶಿವಮೊಗ್ಗ ರಸ್ತೆ ಅಪಘಾತ, ಶಿವಮೊಗ್ಗ ಅಪರಾಧ ಸುದ್ದಿ, ಶಿವಮೊಗ್ಗದಲ್ಲಿ ಕಾರ್ ಮತ್ತು ಲಾರಿ ಮಧ್ಯೆ ಡಿಕ್ಕಿ,](https://etvbharatimages.akamaized.net/etvbharat/prod-images/kn-smg-01-accident-twodeath-7204213_27012022084610_2701f_1643253370_206.jpg)
ಭದ್ರಾವತಿ ಕಡೆಯಿಂದ ಬರುತ್ತಿದ್ದ ಕಾರಿಗೆ ಶಿವಮೊಗ್ಗ ಕಡೆಯಿಂದ ಹೋಗುತ್ತಿದ್ದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಎದುರಿನ ರಸ್ತೆಗೆ ಚಲಿಸಿದೆ. ಈ ವೇಳೆ ಎದುರಗಡೆಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಭದ್ರಾವತಿ ಪೇಪರ್ ಟೌನ್ ನಿವಾಸಿಗಳಾದ ಷಣ್ಮುಗ(39) ಹಾಗೂ ರಾಮಚಂದ್ರ(40) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಓದಿ: India Corona: ದೇಶದಲ್ಲಿ 2.86 ಲಕ್ಷ ಸೋಂಕಿತರು ಪತ್ತೆ, 573 ಮಂದಿ ಮೃತ
ಕೆಲಸದ ನಿಮಿತ್ತ ಶಿವಮೊಗ್ಗದ ಕಡೆ ಹೊರಟಿದ್ದವರು ಸಾವಿನ ಮನೆ ಸೇರಿದ್ದಾರೆ. ಈ ಕುರಿತು ಭದ್ರಾವತಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ