ETV Bharat / city

ಮನೆ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಅತ್ತೆ - ಅಳಿಯ ಅರೆಸ್ಟ್​ - ಮನೆಗಳ್ಳತನ ಮಾಡುತ್ತಿದ್ದ ಖತರ್ನಾಕ್ ಅತ್ತೆ-ಅಳಿಯ ಅರೆಸ್ಟ್

ಸೊರಬ ಪಟ್ಟಣದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ ಖತರ್ನಾಕ್ ಅತ್ತೆ - ಅಳಿಯನನ್ನು ಪೊಲೀಸರು ಬಂಧಿಸಿ, 37 ಗ್ರಾಂ ಬಂಗಾರ ಹಾಗೂ 200 ಗ್ರಾಂ ಬೆಳ್ಳಿ ವಶಪಡಿಸಿಕೊಂಡಿದ್ದಾರೆ.

Two thieves Arrest
ಇಬ್ಬರು ಮನೆಗಳ್ಳರನ್ನು ಬಂಧಿಸಿದ ಸೊರಬ ಪೊಲೀಸರು
author img

By

Published : Jul 14, 2021, 1:18 PM IST

ಶಿವಮೊಗ್ಗ: ಮನೆಗಳ್ಳತನ ಮಾಡುತ್ತಿದ್ದ ಅತ್ತೆ - ಅಳಿಯನ ಜೋಡಿಯನ್ನು ಸೊರಬ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರವಾರದ ಶಿರವಾಡ ಗ್ರಾಮದ ಮರಿಯಪ್ಪ ಮತ್ತು ಕಮಲಮ್ಮ ಬಂಧಿತ ಆರೋಪಿಗಳು. ಇವರಿಂದ 37 ಗ್ರಾಂ ಬಂಗಾರ ಹಾಗೂ 200 ಗ್ರಾಂ ಬೆಳ್ಳಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇಬ್ಬರು ಮನೆಗಳ್ಳರನ್ನು ಬಂಧಿಸಿದ ಸೊರಬ ಪೊಲೀಸರು

ಅತ್ತೆ ಮತ್ತು ಅಳಿಯ ಸೊರಬ ಪಟ್ಟಣದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ ಪೊಲೀಸರು ಹಿಡಿದು ವಿಚಾರಣೆ ನಡೆಸಿದ್ದಾರೆ. ಈ ವೇಳೆ, ಸೊರಬದಲ್ಲಿ ಜನವರಿ 31 ರಂದು ಪ್ರೇಮಾ ನಾಗರಾಜ್ ಅವರ ಮನೆಯಲ್ಲಿ ಕಳ್ಳತನ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾರೆ. ಮರಿಯಪ್ಪ 10 ಗ್ರಾಂ ಬಂಗಾರವನ್ನು ಒಂದು ಕಡೆ ಒತ್ತೆ ಇಟ್ಟು ಉಳಿದ 27 ಗ್ರಾಂ ಬಂಗಾರವನ್ನು ಅತ್ತೆಗೆ ನೀಡಿ, ಖಾಸಗಿ ಬ್ಯಾಂಕ್​ನಲ್ಲಿ ಇಡುವಂತೆ ತಿಳಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸೊರಬ ಸಿಪಿಐ ಮರುಳು ಸಿದ್ದಪ್ಪ ಮಾರ್ಗದರ್ಶನದಲ್ಲಿ ಪಿಎಸ್ಐ ಪ್ರಶಾಂತ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.