ಶಿವಮೊಗ್ಗ: ಸಾಗರ ತಾಲೂಕಿನ ತವರೆಹಳ್ಳಿ ಗ್ರಾಮದಲ್ಲಿ ಮಂಗ ಸಾವನ್ನಪ್ಪಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ.
ತವರೆಹಳ್ಳಿಯ ಜಯಪ್ಪ ಕೆ. ಗೌಡ ಅವರ ಮನೆಯ ಮುಂಭಾಗದಲ್ಲಿ ಮಂಗನ ಶವ ಪತ್ತೆಯಾಗಿದೆ. ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಪಶು ವೈದ್ಯರಾದ ಡಾ.ಮೋಹನ್, ಅರಣ್ಯ ಇಲಾಖೆಯ ಗಾರ್ಡ್ ಬಸವರಾಜ್, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮೃಪಟ್ಟ ಮಂಗನ ಶವ ಪರೀಕ್ಷಿಸಿದ ಬಳಿಕ ಅಂತ್ಯಕ್ರಿಯೆ ನಡೆಸಿದರು.
ಈ ರೀತಿ ಮಂಗಗಳ ಸಾವಿನ ಪ್ರಕರಣಗಳು ಆನಂದಪುರದ ಸುತ್ತಮುತ್ತಿನ ಪ್ರದೇಶಗಳಲ್ಲಿ ಬೆಳಕಿಗೆ ಬಂದಿದೆ. ಈ ರೀತಿ ಮಂಗಗಳ ಸಾವಿಗೆ ಕಾರಣ ಕಾಯಿಲೆಯೋ ಅಥವಾ ಕಾಡು ನಾಶದಿಂದ ಬರಗಾಲ ಉಂಟಾಗಿ ಆಹಾರ ಸಿಗದೆ ಅವುಗಳ ಸಾವು ಸಂಭವಿಸುತ್ತಿದೆಯೇ ಎಂಬ ಬಗ್ಗೆ ಗ್ರಾಮಸ್ಥರಲ್ಲಿ ಅನುಮಾನ ಉಂಟಾಗಿದೆ.
ಸಾಗರ ತಾಲೂಕಿನ ಅರಳಗೋಡು ಸುತ್ತಮುತ್ತ 20ಕ್ಕೂ ಹೆಚ್ಚು ಮಂಗಳ ಸಾವು ಸಂಭವಿಸಿರುವುದನ್ನು ಇಲ್ಲಿ ಸ್ಮರಿಸಬೇಕಿದೆ.
ಮಂಗನ ಕಾಯಿಲೆ ಹರಡುವ ಭೀತಿ ಜನರನ್ನು ಕಾಡುತ್ತಿದ್ದು,ಆರೋಗ್ಯ ಇಲಾಖೆ ಅಧಿಕಾರಿಗಳು ಮುಂಜಾಗೃತಾ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.