ETV Bharat / city

ಸರ್ಕಾರದ ಮಲತಾಯಿ ಧೋರಣೆ ನಮ್ಮ ಗೆಲುವಿಗೆ ಕಾರಣ: ಎಸ್ ರುದ್ರೇಗೌಡ

ಮೋದಿ ಅಲೆ, ಬಿಜೆಪಿಯ ಸಂಘಟಿತ ಪ್ರಯತ್ನ, ದೇಶದ ರಕ್ಷಣೆ ವಿಚಾರ, ಯುವಕರಿಗೆ ಹೊಸ ಭರವಸೆ ಮತ್ತು ಬಿ.ವೈ ರಾಘವೇಂದ್ರ ಮಾಡಿದ ಸಾಧನೆ, ಬಿಎಸ್​ವೈ ಜಿಲ್ಲೆಗೆ ನೀಡಿದ ಕೊಡುಗೆ ಮುಂತಾದ ಕಾರಣಗಳು ಹಾಗೂ ಸರ್ಕಾರದ ಮಲತಾಯಿ ಧೋರಣೆ ನಮ್ಮ ಗೆಲುವಿಗೆ ಕಾರಣವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಸ್ ರುದ್ರೇಗೌಡ ಹೇಳಿದರು

ಎಸ್ ರುದ್ರೇಗೌಡ
author img

By

Published : May 25, 2019, 10:40 PM IST

ಶಿವಮೊಗ್ಗ: ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರುದ್ರೇಗೌಡರು, ಜಿಲ್ಲೆಯ ಪ್ರಬುದ್ಧ ಜನರು ಬಿಜೆಪಿಯನ್ನು ನಿರೀಕ್ಷೆಯ ಮಟ್ಟಕ್ಕಿಂತ ಹೆಚ್ಚಿನ ಮತನೀಡಿ ಗೆಲ್ಲಿಸಿದ್ದಾರೆ. ಚುನಾವಣೆ ಮುಗಿದಿದೆ ಇನ್ನೇನಿದ್ದರೂ ಜಿಲ್ಲೆಯ ಅಭಿವೃದ್ಧಿಯತ್ತ ನಮ್ಮ ಗಮನ ಎಂದರು.

ಶಿವಮೊಗ್ಗ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಎಸ್ ರುದ್ರೇಗೌಡ ಸುದ್ದಿಗೋಷ್ಠಿ

ಒಟ್ಟಾರೆ ಮೋದಿ ಜನಪ್ರಿಯತೆ ಮತ್ತಷ್ಟು ಹೆಚ್ಚಿದ್ದು, ಭವ್ಯ ಭಾರತದ ಭರವಸೆ ಮೂಡಿದೆ. ಜಗತ್ತೇ ಮೆಚ್ಚುವಂಥ ಆಡಳಿತವನ್ನು ಮೋದಿಯವರು ನೀಡಲಿದ್ದಾರೆ ಎಂದರು.ಜಿಲ್ಲೆಯಲ್ಲಿ ಹಲವು ಕೆಲಸಗಳು ಬಾಕಿ ಉಳಿದುಕೊಂಡಿದೆ. ನೂತನವಾಗಿ ಆಯ್ಕೆಯಾಗಿರುವ ಸಂಸದ ಬಿ.ವೈ ರಾಘವೇಂದ್ರ ಅವರು ಅಭಿವೃದ್ಧಿಗೆ ಹೆಚ್ಚು ಆದ್ಯತೆ ಕೊಡಲಿದ್ದಾರೆ. ಪ್ರಮುಖವಾಗಿ ಜಿಲ್ಲೆಯಲ್ಲಿ ಕೈಗಾರಿಕಾ ಕ್ರಾಂತಿ ಆಗಲಿದೆ. ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಭದ್ರಾವತಿಯಲ್ಲಿ ನಿಂತು ಹೋದ ಮತ್ತು ನಿಶ್ಚಲ ಸ್ಥಿತಿಯಲ್ಲಿರುವ ಎರಡು ಕಾರ್ಖಾನೆಗಳ ಪುನಶ್ಚೇತನಕ್ಕೆ ಶ್ರಮಿಸಿ ಕಾರ್ಮಿಕರ ಬಾಳನ್ನು ಹಸನು ಮಾಡುವ ಕೆಲಸವನ್ನು ಮಾಡಲಿದ್ದಾರೆ. ನೀರಾವರಿ ಯೋಜನೆಗಳು, ವಿಮಾನ ನಿಲ್ದಾಣ ಸ್ಥಾಪನೆ, ಬಗರುಕುಂ ಸಮಸ್ಯೆಯಲ್ಲಿ ರೈತರಿಗೆ ನೆರವು ಮುಂತಾದ ಹಲವು ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.

Intro:ಶಿವಮೊಗ್ಗ,
ಮೋದಿ ಅಲೆ ,ಬಿಜೆಪಿಯ ಸಂಘಟಿತ ,ಪ್ರಯತ್ನ ದೇಶದ ರಕ್ಷಣೆ ವಿಚಾರ ,ಯುವಕರಿಗೆ ಹೊಸ ಭರವಸೆ ,ಮತ್ತು ಬಿವೈ ರಾಘವೇಂದ್ರ ಅವರು ಮಾಡಿದ ಸಾಧನೆ ಬಿಎಸ್ ಯಡಿಯೂರಪ್ಪನವರು ಜಿಲ್ಲೆಗೆ ನೀಡಿದ ಕೊಡುಗೆ ಮುಂತಾದ ಹಲವು ಕಾರಣಗಳು ಹಾಗೂ ಸರ್ಕಾರದ ಮಲತಾಯಿ ಧೋರಣೆ ಮೈತ್ರಿಕೂಟ ನಾಯಕರುಗಳ ಹಗುರವಾದ ಮಾತುಗಳು. ನಮ್ಮ ಗೆಲುವಿಗೆ ಕಾರಣವಾಗಿದೆ ಬಿಜೆಪಿ ಜಿಲ್ಲಾಧ್ಯಕ್ಷ ಎಸ್ ರುದ್ರೇಗೌಡ ಹೇಳಿದರು.

Body:ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಜಿಲ್ಲೆಯ ಪ್ರಭುದ್ಧ ಜನರು ಬಿಜೆಪಿಯನ್ನು ನಿರೀಕ್ಷೆಯ ಮಟ್ಟಕಿಂತ ಹೆಚ್ಚಿನ ಮತನೀಡಿ ಗೆಲ್ಲಿಸಿದ್ದಾರೆ .
ಚುನಾವಣೆ ಮುಗಿದಿದೆ ಇನ್ನೇನಿದ್ದರೂ ಜಿಲ್ಲೆಯ ಅಭಿವೃದ್ಧಿಯತ್ತ ನಮ್ಮ ಗಮನ ಎಂದರು.
ಜಿಲ್ಲೆಯಲ್ಲಿ ಹಲವು ಕೆಲಸಗಳು ಬಾಕಿ ಉಳಿದುಕೊಂಡಿದೆ. ನೂತನವಾಗಿ ಆಯ್ಕೆಯಾಗಿರುವ ಸಂಸದ ಬಿವೈ ರಾಘವೇಂದ್ರ ಅವರು ಅಭಿವೃದ್ಧಿಗೆ ಹೆಚ್ಚು ಆದ್ಯತೆ ಕೊಡಲಿದ್ದಾರೆ. ಪ್ರಮುಖವಾಗಿ ಜಿಲ್ಲೆ ಯಲ್ಲಿ ಕೈಗಾರಿಕಾ ಕ್ರಾಂತಿ ಆಗಲಿದೆ .ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ,ಭದ್ರಾವತಿಯಲ್ಲಿ ನಿಂತುಹೋದ ಮತ್ತು ನಿಶ್ಚಲ ಸ್ಥಿತಿ ಎಲ್ಲಿರುವ ಎರಡು ಕಾರ್ಖಾನೆಗಳ ಪುನಶ್ಚೇತನಕ್ಕೆ ಶ್ರಮಿಸಿ ಕಾರ್ಮಿಕರ ಬಾಳನ್ನು ಹಸನು ಮಾಡುವ ಕೆಲಸವನ್ನು ಮಾಡಲಿದ್ದಾರೆ. ನೀರಾವರಿ ಯೋಜನೆಗಳು, ವಿಮಾನ ನಿಲ್ದಾಣ ಸ್ಥಾಪನೆ, ಬಗರುಕುಂ ಸಮಸ್ಯೆ ರೈತರಿಗೆ ನೆರವು,

Conclusion: ಮುಂತಾದ ಹಲವು ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು. ಒಟ್ಟಾರೆ ಮೋದಿ ಜನಪ್ರಿಯತೆ ಮತ್ತಷ್ಟು ಹೆಚ್ಚಿದೆ ,ಭವ್ಯ ಭಾರತದ ಭರವಸೆ ಮೂಡಿದೆ ,ಜಗತ್ತೇ ಮೆಚ್ಚುವಂಥ ಆಡಳಿತವನ್ನು ಮೋದಿಯವರು ನೀಡಲಿದ್ದಾರೆ. ಇದು ಶಿವಮೊಗ್ಗ ಕ್ಷೇತ್ರಕ್ಕೂ ವಿಸ್ತಾರವಾಗಲಿದೆ ಎಂದರು.
ಭೀಮಾನಾಯ್ಕ ಎಸ್ ಶಿವಮೊಗ್ಗ

For All Latest Updates

TAGGED:

shimogga
ETV Bharat Logo

Copyright © 2024 Ushodaya Enterprises Pvt. Ltd., All Rights Reserved.