ಶಿವಮೊಗ್ಗ: ನಾಳೆಯಿಂದ ಶಿವಮೊಗ್ಗ-ಯಶವಂತಪುರ ಮಾರ್ಗವಾಗಿ ತತ್ಕಾಲ್ ಎಕ್ಸ್‍ಪ್ರೆಸ್ ಹೊಸ ರೈಲು ಸೇವೆ ಕಾರ್ಯಾರಂಭ ಮಾಡಲಿದೆ.
ತತ್ಕಾಲ್ ಎಕ್ಸ್‍ಪ್ರೆಸ್ ವಾರದಲ್ಲಿ ನಾಲ್ಕು ದಿನಗಳು ಸಂಚರಿಸಲಿದ್ದು, ಸಂಸದ ಬಿ.ವೈ. ರಾಘವೇಂದ್ರ ಗುರುವಾರ ನೂತನ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ. ಅಶೋಕ ನಾಯ್ಕ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್ ಸೇರಿದಂತೆ ಹಲವರು ಭಾಗಿಯಾಲಿದ್ದಾರೆ.