ETV Bharat / city

ಸಾಗರ : ಹಾವು ಹಿಡಿಯಲು ಹೋದ ಯುವಕನಿಗೆ ಹಾವಿನಿಂದಲೇ ಕಡಿತ

ಹಾವು ಹಿಡಿಯುವ ಕಲೆ ಗೊತ್ತಿಲ್ಲದೆಯೇ ತನ್ನ ಏರಿಯಾದಲ್ಲಿ ಹಾವು ಹಿಡಿಯಲು ಹೋದ ದಿಲ್‌ಶಾದ್​ ರೊನಾಲ್ಡ್​ ಎಂಬಾತನಿಗೆ ನಾಗರಹಾವು ಕಚ್ಚಿದ್ದು, ಹಾವು ಕಚ್ಚಿದ ಜಾಗವನ್ನು ತಾನೇ ಬ್ಲೇಡ್​ನಿಂದ ಕೊಯ್ದುಕೊಂಡಿದ್ದಾನೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ..

Dil Shad ronald
ದಿಲ್ ಶಾದ್ ರೊನಾಲ್ಡ್
author img

By

Published : May 16, 2022, 12:16 PM IST

Updated : May 16, 2022, 12:47 PM IST

ಶಿವಮೊಗ್ಗ : ಹಾವು ಹಿಡಿಯಲು ಹೋದವ ಹಾವಿನಿಂದಲೇ ಕಚ್ಚಿಸಿಕೊಂಡಿರುವ ಘಟನೆ ಸಾಗರದಲ್ಲಿ ನಡೆದಿದೆ. ಸಾಗರದ ಶ್ರೀಧರ ನಗರದ ನಿವಾಸಿ ದಿಲ್‌ಶಾದ್ ರೊನಾಲ್ಡ್ ಹಾವಿನಿಂದ ಕಚ್ಚಿಸಿಕೊಂಡ ಯುವಕ.

ದಿಲ್‌ಶಾದ್ ರೊನಾಲ್ಡ್ ತಮ್ಮದೇ ಏರಿಯಾದ ಮನೆಯೊಂದಕ್ಕೆ ಹಾವು ಬಂದಿದೆ ಎಂದು ತಿಳಿಯುತ್ತಿದ್ದಂತಯೇ ಹಾವು ಹಿಡಿಯಲು ಹೋಗಿದ್ದಾನೆ. ಆದರೆ, ರೊನಾಲ್ಡ್​ಗೆ ಹಾವು ಹಿಡಿಯುವ ಕಲೆ ಗೂತ್ತಿಲ್ಲ. ಇದರಿಂದ ನಾಗರಹಾವಿನಿಂದ ರೊನಾಲ್ಡ್ ಕಚ್ಚಿಸಿಕೊಂಡಿದ್ದಾನೆ. ಹಾವು ಕಚ್ಚಿದ ತಕ್ಷಣ ಹಾವು ಕಚ್ಚಿದ ಜಾಗವನ್ನು ಬ್ಲೇಡ್​ನಿಂದ ಕೊಯ್ದುಕೊಂಡಿದ್ದಾನೆ.

ಹಾವು ಹಿಡಿಯಲು ಹೋದ ಯುವಕನಿಗೆ ಹಾವಿನಿಂದಲೇ ಕಡಿತ

ಇದರಿಂದ ಗಾಬರಿಯಾದ ಮನೆ ಮಾಲೀಕ ತಕ್ಷಣ ರೊನಾಲ್ಡ್ ಅವರನ್ನು ಸಾಗರದ ಉಪವಿಭಾಗಿಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ, ರೊನಾಲ್ಡ್ ಕೈ ಕೊಯ್ದುಕೊಂಡ ಕಾರಣಕ್ಕೆ ರಕ್ತಸ್ರಾವವಾಗುತ್ತಿದ್ದ ಕಾರಣಕ್ಕೆ ಆತನನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನೆ ಮಾಡಲಾಗಿದೆ. ಹಾವು ಹಿಡಿಯುವ ಕಲೆ ತಿಳಿಯದೆ ಅನೇಕರು ಈ ರೀತಿಯಲ್ಲಿ ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳುವತ್ತ ಮುಂದಾಗುತ್ತಿದ್ದಾರೆ. ಇದರಿಂದ ಅರಣ್ಯ ಇಲಾಖೆಯು ಹಾವುಗಳ ಅಪಾಯಕಾರಿ ಗುಣಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕಿದೆ.

ಇದನ್ನೂ ಓದಿ: ಕಲಬುರಗಿ ಎಸ್​​ಪಿ ಈಶಾ ಪಂತ್ ಮನೆಯಲ್ಲಿ 2 ಹಾವು ಪತ್ತೆ, ರಕ್ಷಣೆ

Last Updated : May 16, 2022, 12:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.