ETV Bharat / city

ಬಿಜೆಪಿಯವರು ಸಂವಿಧಾನ ನಾಶ ಮಾಡಲು ಹೊರಟಿದ್ದಾರೆ: ಸಿದ್ದರಾಮಯ್ಯ ಕಿಡಿ - ಪಕ್ಷಾಂತರ ನಿಷೇಧ ಕಾಯ್ದೆ

ಸಂವಿಧಾನದ 10 ನೇ ಶೆಡ್ಯೂಲ್‌ನಲ್ಲಿರುವ ಪಕ್ಷಾಂತರ ನಿಷೇಧ ಕಾಯ್ದೆಯ ಉದ್ದೇಶವನ್ನೇ ಅಮಿತ್ ಷಾ ಹಾಗು ಯಡಿಯೂರಪ್ಪ ನಾಶ ಮಾಡಲು ಹೊರಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ರು.

ಬಿಜೆಪಿಯವರು ಸಂವಿಧಾನದ ಉದ್ದೇಶವನ್ನೇ ಹಾಳು ಮಾಡಲು ಹೊರಟ್ಟಿದ್ದಾರೆ: ಸಿದ್ದು
author img

By

Published : Nov 5, 2019, 7:19 PM IST

ಶಿವಮೊಗ್ಗ: ಸಂವಿಧಾನದ 10 ನೇ ಪರಿಚ್ಚೇಧದಲ್ಲಿರುವ ಪಕ್ಷಾಂತರ ನಿಷೇಧ ಕಾಯ್ದೆಯ ಮೂಲ ಉದ್ದೇಶವನ್ನೇ ಅಮಿತ್ ಷಾ ಹಾಗು ಯಡಿಯೂರಪ್ಪ ನಾಶ ಮಾಡಲು ಹೊರಟಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ರು.

ಸಿಎಂ ಯಡಿಯೂರಪ್ಪ ಅನರ್ಹ ಶಾಸಕರ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿದ್ದು, ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ‌ ನಾನು ಇದ್ನಾ? ಕೋರ್ ಕಮಿಟಿ ಸಭೆಯಲ್ಲಿದ್ದ ಮೂವರಲ್ಲಿ ಆಡಿಯೋ ಕದ್ದವರು ಯಾರು ಎನ್ನುವಂತಾಗಿದೆ ಎಂದು ವ್ಯಂಗ್ಯವಾಡಿದ್ರು.

ಯಡಿಯೂರಪ್ಪನವರು ಅನರ್ಹ ಶಾಸಕರ ಕ್ಷೇತ್ರಗಳಿಗೆ ಮಾತ್ರ ಹೆಚ್ಚಿನ ಅನುದಾನ ನೀಡುತ್ತಿದ್ದು ಅದರ ಅರ್ಥ ಏನು? ಅನರ್ಹರು ಚುನಾವಣೆಯಲ್ಲಿ ಗೆದ್ದು ಬರಲಿದ್ದು ಭವಿಷ್ಯದಲ್ಲಿ ಬಿಜೆಪಿ ಪಕ್ಷ ಸೇರುತ್ತಾರೆ. ಹೀಗಾಗಿಯೇ ಅವರ ಕ್ಷೇತ್ರಗಳಿಗೆ ಹೆಚ್ಚು ಅನುದಾನ ನೀಡಲಾಗುತ್ತಿದೆ ಎಂದರು.

ಚುನಾವಣಾ ಆಯೋಗ ಕೇಂದ್ರ ಸರ್ಕಾರದದ ಕೈಯಲ್ಲಿ‌ದೆ, ಅವರು ಏನು ಹೇಳ್ತಾರೋ ಅದನ್ನವರು ಮಾಡ್ತಾರೆ. ನೀತಿ ಸಂಹಿತೆ ಜಾರಿಯಾಗದೆ ಆಯೋಗ ಚುನಾವಣೆಯ ವೇಳಾಪಟ್ಟಿ ಪ್ರಕಟಿಸೋದನ್ನು ನೀವೆಂದಾದ್ರೂ ನೋಡಿದ್ದೀರಾ? ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಟೀಕಿಸಿದ್ರು.

Intro:ಶಿವಮೊಗ್ಗ

ಫಾರ್ಮೆಟ್: ಎವಿಬಿ

ಸ್ಲಗ್: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಆ್ಯಂಕರ್........
ಬಿಜೆಪಿಯವರು ಸಂವಿಧಾನದ ಉದ್ದೇಶವನ್ನೇ ಹಾಳು ಮಾಡಲು ಹೊರಟ್ಟಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ಇರುವ 10 ಷೆಡ್ಯೂಲ್ ಉದ್ದೇಶವನ್ನೆ ಅಮಿತ್ ಷಾ, ಯಡಿಯೂರಪ್ಪ ನಾಶ ಮಾಡಲು ಹೊರಟ್ಟಿದ್ದಾರೆ. 17 ಜನರ ಕೈಯಲ್ಲಿ ರಾಜೀನಾಮೆ ಕೊಡಿಸಿ, ಚುನಾಯಿತ ಸರಕಾರ ಬೀಳಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ನೀಡುವುದಕ್ಕೆ ಕುಮ್ಮಕ್ಕು ನೀಡಿ, ರಾಜ್ಯದ ಜನತೆಯ ವಿರೋಧಿಯಾಗಿ ನಡೆದುಕೊಂಡಿದ್ದಾರೆ. ಆಡಿಯೋ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ‌ ನಾನು ಇದ್ನಾ. ಕೋರ್ ಕಮಿಟಿ ಸಭೆಯಲ್ಲಿ ಇದ್ದವರು ಅವರು, ಇದ್ದವರು ಮೂವರಲ್ಲಿ ಕದ್ದವರು ಯಾರು ಎನ್ನುವಂತಾಗಿದೆ ಎಂದು ಗೇಲಿ ಮಾಡಿದರು. ಆಪರೇಷನ್ ಕಮಲ ವಿಚಾರಕ್ಕೆ ಸಂಬಂಧಿಸಿದಂತೆ ಕೆ.ಆರ್.ಪೇಟೆ ಅನರ್ಹ ಶಾಸಕ ನಾರಾಯಣಗೌಡ ಸತ್ಯವನ್ನೇ ಹೇಳಿದ್ದಾರೆ. ಯಡಿಯೂರಪ್ಪನವರು ಅನರ್ಹ ಶಾಸಕರ ಕ್ಷೇತ್ರಗಳಿಗೆ ಮಾತ್ರ ಹೆಚ್ಚಿನ ಅನುದಾನ ನೀಡುತ್ತಿದ್ದಾರೆ ಅಂದರೆ ಅದರ ಅರ್ಥ ಏನು ಎಂದು ಪ್ರಶ್ನಿಸಿದರು. ಚುನಾವಣಾ ಆಯೋಗ ಕೇಂದ್ರ ಸರಕಾರದ ಕೈಯಲ್ಲಿ‌ ಇದೆ ಅವರು ಏನು ಹೇಳ್ತಾರೆ ಅದನ್ನು ಅವರು ಮಾಡ್ತಾರೆ. ಕೋಡ್ ಆಫ್ ಕಂಡಕ್ಟ್ ಇಲ್ಲದೇ ಎಲೆಕ್ಷನ್ ನಲ್ಲಿ ಕ್ಯಾಲೆಂಡರ್ ಆಫ್ ಇವೆಂಟ್ಸ್ ಮಾಡೋದು ನೋಡಿದ್ದೀರಾ ಎಲ್ಲಾದ್ರೂ ಎಂದರು. ಚಿಕ್ಕಬಳ್ಳಾಪುರಕ್ಕೆ ಏಕೆ ಮೆಡಿಕಲ್ ಕಾಲೇಜ್ ಕೊಟ್ಟರು. ರಾಜೀನಾಮೆ ನೀಡಿದ ಶಾಸಕರನ್ನು ಅನರ್ಹ ಮಾಡಿ ಅಂತ ಸ್ಪೀಕರ್ ಗೆ ಮನವಿ‌ ಮಾಡಿದ್ದೇ ನಾನು. 17 ಜನ ರಾಜೀನಾಮೆ ಕೊಡಲಿಲ್ಲ ಅಂದ್ರೆ ಸಿದ್ದರಾಮಯ್ಯ ಸರಕಾರ ಬೀಳಿಸುತ್ತಿದ್ದನಾ..? ರಾಜೀನಾಮೆ ಕೊಟ್ಟಿದ್ದು ಅವರಾ...ನಾನಾ. ಅವರು ಸಣ್ಣ‌ ಮಕ್ಕಳಾ, ಕಳ್ಳೆಪುರಿ ತಿನ್ನುತ್ತಿದ್ದರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಬೈಟ್: ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ
ಭೀಮಾನಾಯ್ಕ ಎಸ್ ಶಿವಮೊಗ್ಗ
Body:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.