ETV Bharat / city

ಶಿವಮೊಗ್ಗದಲ್ಲಿ ಕಳುವಾಗಿದ್ದ ಕಾರು ವಿಜಯಪುರದಲ್ಲಿ ಪತ್ತೆ: ಆರೋಪಿ ಅರೆಸ್ಟ್​ - ಶಿವಮೊಗ್ಗ ಕಾರು ಕಳ್ಳನ ಬಂಧನ ನ್ಯೂಸ್​

ಕಾರುಗಳನ್ನು ಎಗರಿಸುತ್ತಿದ್ದ ಖದೀಮನನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

car Thief
car Thief
author img

By

Published : Dec 28, 2019, 7:13 AM IST

Updated : Dec 28, 2019, 7:24 AM IST

ಶಿವಮೊಗ್ಗ: ಮನೆ ಹಾಗೂ ರಸ್ತೆ ಅಕ್ಕ - ಪಕ್ಕ ನಿಲ್ಲಿಸುತ್ತಿದ್ದ ಕಾರುಗಳನ್ನು ಎಗರಿಸುತ್ತಿದ್ದ ಖದೀಮನೋರ್ವನನ್ನು ಕೊನೆಗೂ ಇಲ್ಲಿನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಕಾಶ್ ಬಂಧಿತ ಆರೋಪಿ. ಶಿವಮೊಗ್ಗದ ನೆಹರು ರಸ್ತೆಯ ಕೃಷ್ಣ ಲಾಡ್ಜ್ ಮುಂದೆ ನಿಲ್ಲಿಸಿದ್ದ ಕಾರನ್ನು ಡಿಸೆಂಬರ್ 22 ರಂದು ಕಳ್ಳತನ ಮಾಡಿ, ಜೊತೆಗೆ ಕಾರಿನಲ್ಲಿದ್ದ 41 ಸಾವಿರ ರೂ. ಗಳನ್ನು ತೆಗದುಕೊಂಡು ಪರಾರಿಯಾಗಿದ್ದ. ಈ ಕುರಿತು ಕೋಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಭುಯಾರ್ ಗ್ರಾಮದಲ್ಲಿ ಬಂಧಿಸಿದ್ದಾರೆ.

ಕಾರಿನ ಬೆಲೆ 12 ಲಕ್ಷ ರೂ. ಗಳಾಗಿದ್ದು, ಕಾರಿನ ಸಮೇತ ಆರೋಪಿಯನ್ನು ಬಂಧಿಸಿದ ಕೋಟೆ ಪೊಲೀಸರಿಗೆ ಎಸ್.​ಪಿ. ಶಾಂತರಾಜು ಅಭಿನಂದನೆ ಸಲ್ಲಿಸಿದ್ದಾರೆ.

Intro:ಶಿವಮೊಗ್ಗದಲ್ಲಿ ಕಳುವಾಗಿದ್ದ ಕಾರು ಬಿಜಾಪುರದಲ್ಲಿ ಪತ್ತೆ: ಕಾರು ಕದ್ದವ ಅಂದರ್.

ಶಿವಮೊಗ್ಗ: ಕಾರುಗಳನ್ನು ಕದಿಯುತ್ತಿದ್ದ ಕದೀಮನನ್ನು ಶಿವಮೊಗ್ಗದ ಕೋಟೆ ಪೊಲೀಸರು ಬಂಧಿಸಿದ್ದಾರೆ. ಆಕಾಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. Body: ಈತ ಶಿವಮೊಗ್ಗ ನೆಹರು ರಸ್ತೆಯ ಕೃಷ್ಣ ಲಾಡ್ಜ್ ಮುಂದೆ ನಿಲ್ಲಿಸಿದ್ದ ರೆನಾಲ್ಟೊ ಡಸ್ಟರ್ ಕಾರನ್ನು ಡಿಸಂಬರ್ 22 ರಂದು ಕಳ್ಳತನ ಮಾಡಿ ಕೊಂಡು ಹೋಗಿರುತ್ತಾನೆ. ಕಾರಿನ ಜೊತೆ ಕಾರಿನಲ್ಲಿದ್ದ 41 ಸಾವಿರ ರೂ ಗಳನ್ನು ತೆಗದು ಕೊಂಡು ಪರಾರಿಯಾಗಿದ್ದ.Conclusion:ಈ ಕುರಿತು ಕೋಟೆ ಪೊಲೀಸರು ಕೇಸು ದಾಖಲಿಸಿ ಕೊಂಡು ಆರೋಪಿ ಆಕಾಶ್ ನನ್ನು ಬಿಜಾಪುರ ಜಿಲ್ಲೆ ಇಂಡಿ ತಾಲೂಕಿನ ಭುಯಾರ್ ಗ್ರಾಮದಲ್ಲಿ ಬಂಧಿಸಿದ್ದಾರೆ. ಸದ್ಯ ಕಾರಿನ ಬೆಲೆ 12 ಲಕ್ಷ ರೂಗಳಾಗಿವೆ. ಕಾರಿನ ಸಮೇತ ಆರೋಪಿಯನ್ನು ಬಂಧಿಸಿದ ಕೋಟೆ ಪೊಲೀಸರಿಗೆ ಎಸ್ಪಿ ಶಾಂತರಾಜು ಅಭಿನಂದನೆ ಸಲ್ಲಿಸಿದ್ದಾರೆ.
Last Updated : Dec 28, 2019, 7:24 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.