ETV Bharat / city

ಶಿವಮೊಗ್ಗ: ನಂಜುಂಡೇಶ್ವರ ಸ್ವಾಮಿ‌ಯ ಅದ್ಧೂರಿ ರಥೋತ್ಸವ - Shivamogga: Nanjundeshwara Rathotsava

ಜಿಲ್ಲೆಯ ಭದ್ರಾವತಿ ತಾಲೂಕಿನ ನಾಗತಿ ಬೆಳಗಲು ಗ್ರಾಮದಲ್ಲಿ ಐದು ದಿನಗಳ ಕಾಲ ನಂಜುಂಡೇಶ್ವರನ ಜಾತ್ರೆ ನಡೆಯುತ್ತದೆ. ಜಾತ್ರೆಗೆ ಆಹ್ವಾನ ನೀಡಲು ಸ್ವತಃ ನಂಜುಂಡೇಶ್ವರ ದೇವರ ಉತ್ಸವ ಮೂರ್ತಿಯು ಅಕ್ಕ ಪಕ್ಕದ ಹಳ್ಳಿಗಳಿಗೆ ಭೇಟಿ ನೀಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ಇದರ ಮರುದಿನ ಬೆಳಗ್ಗೆ ಕೆಂಡ ಉತ್ಸವ ನಡೆದರೆ ಸಂಜೆ ರಥೋತ್ಸವವು ಜರುಗುತ್ತದೆ.

shivamogga-nanjundeshwara-rathotsava
ನಂಜುಂಡೇಶ್ವರ ಸ್ವಾಮಿ‌ಯ ಅದ್ಧೂರಿ ರಥೋತ್ಸವ
author img

By

Published : Apr 14, 2022, 1:27 PM IST

ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ನಾಗತಿ ಬೆಳಗಲು ಗ್ರಾಮದಲ್ಲಿ ನಂಜುಂಡೇಶ್ವರ ಸ್ವಾಮಿ ರಥೋತ್ಸವವು ಅತ್ಯಂತ ವಿಜೃಂಭಣೆಯಿಂದ ಸಂಪನ್ನಗೊಂಡಿದೆ. ಗ್ರಾಮದ ನಂಜುಂಡೇಶ್ವರ ಸ್ವಾಮಿ ಎಂದರೆ ಸುತ್ತಮುತ್ತಲಿನ ಭಕ್ತರಿಗೆ ದೇವರ ಜೊತೆಗೆ ಚರ್ಮ ರೋಗಗಳನ್ನು ನಿವಾರಿಸುವ ವೈದ್ಯನಾಗಿದ್ದಾನೆ. ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ನಡೆಯುವ ನಂಜುಂಡೇಶ್ವರನ ಜಾತ್ರೆಗೆ ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸುತ್ತಾರೆ.

ನಂಜುಂಡೇಶ್ವರ ಸ್ವಾಮಿ‌ಯ ಅದ್ಧೂರಿ ರಥೋತ್ಸವ

ಜಾತ್ರೆಯ ವಿಶೇಷ: ಗ್ರಾಮದಲ್ಲಿ ಐದು ದಿನಗಳ ಕಾಲ ನಂಜುಂಡೇಶ್ವರನ ಜಾತ್ರೆ ನಡೆಯುತ್ತದೆ. ಜಾತ್ರೆಗೆ ಆಹ್ವಾನ ನೀಡಲು ಸ್ವತಃ ನಂಜುಂಡೇಶ್ವರ ದೇವರ ಉತ್ಸವ ಮೂರ್ತಿಯು ಅಕ್ಕ ಪಕ್ಕದ ಹಳ್ಳಿಗಳಿಗೆ ಭೇಟಿ ನೀಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ಇದರ ಮರುದಿನ ಬೆಳಗ್ಗೆ ಕೆಂಡ ಉತ್ಸವ ನಡೆದರೆ ಸಂಜೆ ರಥೋತ್ಸವ ಜರುಗುತ್ತದೆ.

ತೇರಿಗೆ ಕಾಳುಮೆಣಸು, ಮಂಡಕ್ಕಿ, ಒಣ ಕೊಬ್ಬರಿ ಅರ್ಪಿಸುವ ಭಕ್ತರು: ನಂಜುಂಡೇಶ್ವರನ ರಥೋತ್ಸವವು ಸಂಜೆ ವೇಳೆ ನಡೆಯುತ್ತದೆ. ತೇರಿಗೆ ಮಂಡಕ್ಕಿ ಮತ್ತು ಮೆಣಸು ಅರ್ಪಿಸುವುದರಿಂದ ಸಮಸ್ಯೆಗಳು ದೂರವಾಗುತ್ತದೆ ಎಂದು ಭಕ್ತರು ನಂಬುತ್ತಾರೆ. ಮತ್ತೆ ಕೆಲವರು, ಬೆಂಕಿಯ ಹೊಂಡಕ್ಕೆ ಒಣ ಕೊಬ್ಬರಿ ಹಾಕುತ್ತಾರೆ. ಜೊತೆಗೆ ಯಾವುದಾದರೂ ಚರ್ಮ ಸಮಸ್ಯೆಗಳಿದ್ದರೆ, ದೇವರ ಬಳಿ ತಮ್ಮ ಕಷ್ಟಗಳನ್ನು ಪರಿಹರಿಸುವಂತೆ ಬೇಡಿದರೆ ನಿವಾರಣೆಯಾಗುತ್ತದೆ ಎಂಬ ನಂಬಿಕೆಯೂ ಜನರದ್ದಾಗಿದೆ.‌

ಓದಿ : ಮಲೆನಾಡಿನಲ್ಲಿ ಕೆಜಿಎಫ್ ಗೆ ಅದ್ಧೂರಿ ಸ್ವಾಗತ: ಮದುವೆ ಮರುದಿನವೇ ಚಿತ್ರ ವೀಕ್ಷಿಸಿದ ನವಜೋಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.