ETV Bharat / city

ಮದುವೆ ಮನೆ ಊಟ ತಿಂದ 80 ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲು

ಮದುವೆ ಸಮಾರಂಭದಲ್ಲಿ ಆಹಾರ ಸೇವಿಸಿದ್ದ 80ಕ್ಕೂ ಅಧಿಕ ಮಂದಿಗೆ ವಾಂತಿ - ಭೇದಿ ಕಾಣಿಸಿಕೊಂಡು ಅಸ್ವಸ್ಥರಾದ ಪರಿಣಾಮ ಆಸ್ಪತ್ರೆಗೆ ದಾಖಲಾದ ಘಟನೆ ಶಿವಮೊಗ್ಗದ ಗೆಜ್ಜೇನಹಳ್ಳಿಯಲ್ಲಿ ನಡೆದಿದೆ.

Shivamogga 80 people hospitalized after eating meals of wedding
ಮದುವೆ ಮನೆಯ ಊಟ ತಿಂದ 80 ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲು
author img

By

Published : May 7, 2022, 8:43 PM IST

ಶಿವಮೊಗ್ಗ: ಮದುವೆ ಮನೆಯಲ್ಲಿ ಊಟ ಮಾಡಿದ 80ಕ್ಕೂ ಹೆಚ್ಚು ಮಂದಿ ವಿಷಾಹಾರ ಸೇವನೆ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ.‌ ಶಿವಮೊಗ್ಗ ತಾಲೂಕಿನ ಗೆಜ್ಜೆನಹಳ್ಳಿಯಲ್ಲಿ ನಿನ್ನೆ ಮದುವೆ ನಡೆದಿದೆ. ಮದುವೆಯಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು.

ನಿನ್ನೆ ಎಲ್ಲರೂ ಖುಷಿ ಖುಷಿಯಿಂದ ಮದುವೆಯಲ್ಲಿ ಭಾಗಿ ಊಟ ಮುಗಿಸಿ ಮನೆ ಸೇರಿ ಕೊಂಡಿದ್ದರು. ಆದರೆ, ರಾತ್ರಿ ಆಗುತ್ತಲೆ ಎಲ್ಲರಲ್ಲೂ ಹೊಟ್ಟೆ ನೋವು, ಭೇದಿ ಕಾಣಿಸಿಕೊಂಡಿದೆ. ಹೀಗೆ ವಾಂತಿ ಭೇದಿ ಕಾಣಿಸಿಕೊಂಡ ನಂತರ ಸ್ಥಳೀಯ ಆಸ್ಪತ್ರೆಯಲ್ಲಿ ತೋರಿಸಿದ್ದಾರೆ.

ನಂತರ ಎಲ್ಲರೂ ಸಹ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ. ಸದ್ಯ 30 ಮಂದಿ ವಯಸ್ಕರು ಹಾಗೂ 30 ಮಕ್ಕಳು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅಡುಗೆಗೆ ಬಳಸಿದ್ದ ನೀರು ಅಥವಾ ಆಹಾರದಲ್ಲಿನ ವ್ಯತ್ಯಾಸ ಪುಡ್ ಪಾಯಿಜನ್​ಗೆ ಕಾರಣವಾಗಿದೆ ಎನ್ನಲಾಗಿದೆ. ಆಸ್ಪತ್ರೆಗೆ ದಾಖಲಾದವರು ಸದ್ಯ ಚೇತರಿಕೆ ಕಂಡಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಖೋಟಾ ನೋಟು ಚಲಾವಣೆ ; ಸಣ್ಣಪುಟ್ಟ ವ್ಯಾಪಾರಸ್ಥರೇ ಟಾರ್ಗೆಟ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.