ETV Bharat / city

ಶಿವಮೊಗ್ಗದ ಶಾಸಕರಾದ ರುದ್ರೇಗೌಡ, ಸಂಗಮೇಶ್​ರಿಗೆ ಕೊರೊನಾ ಪಾಸಿಟಿವ್​.. ಹೋಂ ಕ್ವಾರಂಟೈನ್​ - ಭದ್ರಾವತಿ ಶಾಸಕ ಸಂಗಮೇಶ್​ಗೆ ಕೊರೊನಾ

ಭದ್ರಾವತಿಯ ಶಾಸಕ ಬಿ.ಕೆ.ಸಂಗಮೇಶ್ ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಬಳಿಕ ಕೊರೊನಾ ಪರೀಕ್ಷಗೆ ಒಳಗಾಗಿದ್ದು, ಅವರಿಗೂ ಪಾಸಿಟಿವ್​ ಬಂದಿದೆ. ಇದರಿಂದ ಶಾಸಕರು ಮನೆಯಲ್ಲಿಯೇ ಪ್ರತ್ಯೇಕವಾಗಿ ಕ್ವಾರಂಟೈನ್​ ಆಗಿದ್ದಾರೆ..

corona-positive
ಕೊರೊನಾ ಪಾಸಿಟಿವ್
author img

By

Published : Jan 15, 2022, 6:37 PM IST

ಶಿವಮೊಗ್ಗ : ಜಿಲ್ಲೆಯ ಇಬ್ಬರು ಶಾಸಕರಿಗೆ ಕೊರೊನಾ ಸೋಂಕು ತಗುಲಿದೆ. ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ಮತ್ತು ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್​ ಅವರಿಗೆ ಇಂದು ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ವಿಧಾನಪರಿಷತ್​ ಸದಸ್ಯ ರುದ್ರೇಗೌಡರಿಗೆ ಕೊರೊನಾ ಪಾಸಿಟಿವ್ ಬಂದಿದ್ದರೂ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಆದರೂ ವೈದ್ಯರ ಸಲಹೆಯಂತೆ ಹೋಂ ಐಸೋಲೇಷನ್ ಆಗಿದ್ದಾರೆ.

ಇನ್ನು ಭದ್ರಾವತಿಯ ಶಾಸಕ ಬಿ.ಕೆ.ಸಂಗಮೇಶ್ ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಬಳಿಕ ಕೊರೊನಾ ಪರೀಕ್ಷಗೆ ಒಳಗಾಗಿದ್ದು, ಅವರಿಗೂ ಪಾಸಿಟಿವ್​ ಬಂದಿದೆ. ಇದರಿಂದ ಶಾಸಕರು ಮನೆಯಲ್ಲಿಯೇ ಪ್ರತ್ಯೇಕವಾಗಿ ಕ್ವಾರಂಟೈನ್​ ಆಗಿದ್ದಾರೆ.

ಅದಲ್ಲದೇ ಶಾಸಕರ ಮಗ ಗಣೇಶ ಅವರಿಗೂ ಸಹ ಸೋಂಕು ತಗುಲಿರುವುದು ದೃಢಪಟ್ಟಿದೆ. ಯಾರಿಗೂ ಸಹ ರೋಗದ ಯಾವುದೇ ಲಕ್ಷಣಗಳಿಲ್ಲ ಎಂದು ವೈದ್ಯರು ದೃಢೀಕರಿಸಿದ್ದಾರೆ.

ಇದನ್ನೂ ಓದಿ: ಕೊಟ್ಟ ಸಾಲ ಕೇಳಿದ್ದಕ್ಕೆ ಅಪಪ್ರಚಾರ: ಇಬ್ಬರು ಮಕ್ಕಳೊಂದಿಗೆ ಭದ್ರಾ ನಾಲೆಗೆ ಹಾರಿ ತಾಯಿ ಆತ್ಮಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.