ಬೆಂಗಳೂರು: ದೆಹಲಿಯ ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್ನಲ್ಲಿ ನಡೆಯಲಿರುವ ಸ್ವಚ್ಛ ಭಾರತ್ ಮಿಷನ್ 2.0 ಹಾಗೂ ಅಮೃತ್ ಯೋಜನೆ 2.0 ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದು, ರಾಜ್ಯದ 13 ಗಣ್ಯರನ್ನು ಆಹ್ವಾನಿಸಲಾಗಿದೆ.
ಶಿವಮೊಗ್ಗ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ, ದಾವಣಗೆರೆ ಪಾಲಿಕೆಯ ಮೇಯರ್ ಎಸ್.ಟಿ.ವಿರೇಶ್, ದಾವಣಗೆರೆ ಪಾಲಿಕೆಯ ಆಯುಕ್ತರಾದ ವಿಶ್ವನಾಥ್ ಮುದ್ದಜ್ಜಿ, ಮೈಸೂರು ಮೇಯರ್ ಸುನಂದಾ, ಮೈಸೂರು ಕಮಿಷನರ್ ಲಕ್ಷ್ಮೀಕಾಂತ ರೆಡ್ಡಿ, ಶಿವಮೊಗ್ಗ ಆಯುಕ್ತ ಚಿದಾನಂದ ವಟಾರೆ, ಹೊಸಕೋಟೆ ಪುರಸಭೆ ಅಧ್ಯಕ್ಷ ಅರುಣ್ ಕುಮಾರ್, ಬಂಟ್ವಾಳದ ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮದ್ ಶರೀಪ್ ಪರ್ಲಿಯಾ, ಶಿಗ್ಗಾಂವ್ ತಾಲೂಕು ಪಂಚಾಯತ್ ಅಧ್ಯಕ್ಷ ಶ್ರೀಕಾಂತ್ ಬುಲ್ಲಂಕನವರ್, ಇಇ ಸ್ನೇಹಲತಾ, ಹೊಸಕೋಟೆ ಪುರಸಭೆ ಕಮಿಷನರ್ ಡಾ.ರಮೇಶ್, ಬಂಟ್ವಾಳ ತಾಲೂಕು ಪಂಚಾಯತ್ನ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಮತ್ತು ಶಿಗ್ಗಾಂವ್ ತಾಲೂಕು ಪಂಚಾಯತ್ನ ಮುಖ್ಯಾಧಿಕಾರಿ ಮಲ್ಲಯ್ಯ ಹೀರೇಮಠ್ ಅವರಿಗೆ ಆಹ್ವಾನ ನೀಡಲಾಗಿದೆ.
ಇದನ್ನೂ ಓದಿ: ಸ್ಮಾರ್ಟ್ ಫೋನ್, ವಾಟ್ಸ್ಆ್ಯಪ್ನಲ್ಲೇ ಅದೃಷ್ಟ ಸಂಖ್ಯೆಯ ಆಟ: ಆನ್ಲೈನ್ ಮಟ್ಕಾ ದಂಧೆಗೆ ಕಡಿವಾಣ ಯಾವಾಗ?
'ಪ್ರಧಾನಿ ಕಾರ್ಯಾಲಯದಿಂದ ಆಹ್ವಾನ ಬಂದಿರುವುದಕ್ಕೆ ಸಂತಸವಾಗಿದೆ. ವಿಚಾರ ಸಂಕಿರಣದಲ್ಲಿ ಪಡೆಯುವ ಅನುಭವವನ್ನು ನಗರದ ಅಭಿವೃದ್ಧಿಗೆ ಅಳವಡಿಸಲು ಪ್ರಯತ್ನಿಸುತ್ತೇನೆ' ಎಂದು ಶಿವಮೊಗ್ಗದ ಮೇಯರ್ ಸುನಿತಾ ಅಣ್ಣಪ್ಪ ಹೇಳಿದ್ದಾರೆ.
ದಾವಣಗೆರೆ ಪಾಲಿಕೆಯ ಮೇಯರ್ ಎಸ್.ಟಿ.ವಿರೇಶ್ ಅವರು ಕೂಡ ಈ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದು, ಅವರ ಅಭಿಮಾನಿಗಳು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಇವರೆಲ್ಲರೂ ನಾಳೆ ನಡೆಯುವ ಕಾರ್ಯಕ್ರಮಕ್ಕೆ ಹಾಜರಾಗಲು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.