ಶಿವಮೊಗ್ಗ: ಅರಣ್ಯ ಇಲಾಖೆ ಸಂಚಾರಿ ದಳದ ಸಿಬ್ಬಂದಿ ದಾಳಿ ನಡೆಸಿ ಆನೆ ದಂತ ಹಾಗೂ 13 ಚಿರತೆ ಉಗುರುಗಳನ್ನು ವಶಕ್ಕೆ ಪಡೆದಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ನಾಲ್ಲೂರು ಗ್ರಾಮದಲ್ಲಿ ಆನೆ ದಂತವನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು, ಗ್ರಾಮದ ರಾಜಗೋಪಾಲ ಹಾಗೂ ನೆರಟೂರು ಗ್ರಾಮದ ಕೃಷ್ಣಮೂರ್ತಿ ಎಂಬುವರನ್ನು ಬಂಧಿಸಿದ್ದಾರೆ. ಈ ಆನೆ ದಂತ ತೀರ್ಥಹಳ್ಳಿಯ ಭೀಮನಕಟ್ಟೆಯ ಭೀಮಸೇತು ಮುನಿವೃಂದ ಮಠಕ್ಕೆ ಸೇರಿದ್ದು ಎನ್ನಲಾಗಿದೆ.
ಸಾಗರ ತಾಲೂಕಿನ ತುಮುರಿ ಗ್ರಾಮದಲ್ಲಿ ಚಿರತೆಯ 13 ಉಗುರುಗಳನ್ನು ವಶಕ್ಕೆ ವಶಕ್ಕೆ ಪಡೆಯಲಾಗಿದ್ದು, ದೇವರಾಜ, ಉದಯಕುಮಾರ್, ಸುಧಾಕರ ಮತ್ತು ನವೀನ್ ಎಂಬುವರನ್ನು ಬಂಧಿಸಲಾಗಿದೆ. ಬಳಿಕ ಆರೋಪಿಗಳನ್ನು ತೀರ್ಥಹಳ್ಳಿ ನ್ಯಾಯಾಲಯದ ವಶಕ್ಕೆ ನೀಡಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಡಿಸಿಎಫ್ ಐ.ಎಂ. ನಾಗರಾಜ್ರವರ ನೇತೃತ್ವದಲ್ಲಿ ಎಸಿಎಫ್ ಬಾಲಚಂದ್ರ ಹಾಗೂ ಅರಣ್ಯಾಧಿಕಾರಿಗಳಾದ ಸಂಜಯ, ರೇವಣ್ಣ ಸಿದ್ದಯ್ಯ, ಹನುಮಂತರಾಯ, ಮಹದೇವ ಅವರು ಭಾಗಿಯಾಗಿದ್ದರು.