ETV Bharat / city

ಸಾರ್ವಜನಿಕರ ಹಣ ಸರಿಯಾಗಿ ವಿನಿಯೋಗವಾಗುತ್ತಿಲ್ಲ: ಶಿವಮೊಗ್ಗ ಪಾಲಿಕೆ ಸಭೆಯಲ್ಲಿ ಜನರ ಬೇಸರ - ಬಜೆಟ್ ಪೂರ್ವಭಾವಿ ಸಭೆ

ಕಳೆದ ವರ್ಷಗಳಲ್ಲಿ ಅಭಿವೃದ್ಧಿಗಾಗಿ ಮೀಸಲಾಗಿಟ್ಟಿದ್ದ ಹಣ ಸಮರ್ಪಕವಾಗಿ ಖರ್ಚು ಆಗಿಲ್ಲ. ಸಾರ್ವಜನಿಕರ ಹಣ ಸರಿಯಾಗಿ ವಿನಿಯೋಗವಾಗುತ್ತಿಲ್ಲ ಎಂದು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಶಿವಮೊಗ್ಗ ನಗರ ನಿವಾಸಿಗಳು ದೂರಿದರು.

shivamogga-budget-preliminary-meeting
ಶಿವಮೊಗ್ಗ ನಗರ ಪಾಲಿಕೆ
author img

By

Published : Feb 12, 2021, 9:23 PM IST

ಶಿವಮೊಗ್ಗ: ಸಾರ್ವಜನಿಕರ ಹಣ ಸರಿಯಾಗಿ ವಿನಿಯೋಗವಾಗುತ್ತಿಲ್ಲ. ಕಳೆದ ವರ್ಷಗಳಲ್ಲಿ ಮೀಸಲಾಗಿಟ್ಟಿದ್ದ ಹಣವು ಕೂಡ ಸಮರ್ಪಕವಾಗಿ ಖರ್ಚು ಆಗಿಲ್ಲ ಎಂದು ಶಿವಮೊಗ್ಗ ನಿವಾಸಿಗಳು ಇಂದು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಆರೋಪಿಸಿದರು.

ಸಾರ್ವಜನಿಕರ ಹಣ ಸರಿಯಾಗಿ ವಿನಿಯೋಗವಾಗುತ್ತಿಲ್ಲ

ಈ ಬಾರಿಯ ಬಜೆಟ್​ನಲ್ಲಿ ನಗರದ ಮುಖ್ಯ ರಸ್ತೆಗಳಲ್ಲಿ ಸುಸಜ್ಜಿತ ಬಸ್ ಬೇ ನಿರ್ಮಿಸುವುದು, ಕನ್ಸರ್ವೆನ್ಸಿ ಸಮರ್ಪಕ ಬಳಕೆ ಮತ್ತು ನಿರ್ವಹಣೆ ಬಗ್ಗೆ ಗಮನ ಹರಿಸುವುದು, ಹಸರೀಕರಣ ಮಾಡುವುದು, ವೈಜ್ಞಾನಿಕ ಪಾರ್ಕಿಂಕ್ ವ್ಯವಸ್ಥೆ ಜಾರಿ ತರುವುದು, ಮುಖ್ಯವಾಗಿ ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯನ್ನು ಪೂರ್ಣಗೊಳಿಸುವುದು, ನಗರದಲ್ಲಿ ಭದ್ರತೆಗಾಗಿ ಸಿಸಿ ಟಿವಿಟಿವಿ ಕ್ಯಾಮರಾಗಳನ್ನು ಅಳವಡಿಸುವುದು ಮತ್ತು ಸಾರ್ವಜನಿಕರಿಗೆ ಹೊರೆ ಆಗುವಂತಹ ಯಾವುದೇ ಹೆಚ್ಚಿನ ತೆರಿಗೆ ವಿಧಿಸದಂತೆ ಈ ಬಾರಿಯ ಬಜೆಟ್​ನಲ್ಲಿ ಯೋಜನೆಗಳನ್ನು ರೂಪಿಸಬೇಕು ಎಂದು ಸಲಹೆ ಸೂಚನೆ ನೀಡಿದರು.

ಸಭೆಯಲ್ಲಿ ಮಹಾನಗರ ಪಾಲಿಕೆ ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರುಳಿಧರ್, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಠಾರೆ, ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.