ಶಿವಮೊಗ್ಗ : ಭೂಮಿ ವಸತಿ ಹಕ್ಕು ವಂಚಿತರಿಗೆ ಆಳುವ ಸರ್ಕಾರಗಳು ಭೂಮಿ ನೀಡದೇ ಮೋಸ ಮಾಡುತ್ತಿವೆ. ಎಲ್ಲ ಭೂಮಿ ವಂಚಿತರಿಗೆ ಸರ್ಕಾರ ಭೂಮಿ ನೀಡಬೇಕೆಂದು ಆಗ್ರಹಿಸಿ ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ಜನಜಾಗೃತಿ ಜಾಥಾವನ್ನು ನಡೆಸಲಾಯಿತು.
ಶಿವಮೊಗ್ಗದ ಪ್ರೆಸ್ಕ್ಲಬ್ನಲ್ಲಿ ಈ ಜನ ಜಾಗೃತಿಯನ್ನು ನಡೆಸಲಾಯಿತು. ಜನಜಾಗೃತಿಯಲ್ಲಿ ರೈತ ಸಂಘ, ಜನಪರ ಹೋರಾಟ ಸಮಿತಿಯವರು ಭಾಗಿಯಾಗಿದ್ದರು. ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು ಸೆ. 14 ರಂದು ಮೈಸೂರು ಜಿಲ್ಲೆ ಹುಣಸೂರಿನ ಮಾಜಿ ಸಿಎಂ ದೇವರಾಜ್ ಅರಸ್ ಅವರ ಸಮಾಧಿಯಿಂದ ಪ್ರಾರಂಭವಾಗಿದೆ. ಜಾಥಾವು ಸೆ. 20 ರಂದು ಬೆಂಗಳೂರಿನಲ್ಲಿ ನಡೆಯುವ ರೈತ- ದಲಿತ- ಕಾರ್ಮಿಕರ ಬೃಹತ್ ಅನಿರ್ದಿಷ್ಠಾವಧಿ ಸತ್ಯಾಗ್ರಹದಲ್ಲಿ ಮುಕ್ತಾಯವಾಗಲಿದೆ.
ಜಾಥಾ ರಾಜ್ಯಾದ್ಯಾಂತ ಸಂಚಾರ ನಡೆಸುತ್ತಿದೆ. ಸೆ. 20 ರಂದು ಮುಕ್ತಾಯವಾಗುತ್ತದೆ. ಸರ್ಕಾರ ಭೂ ಬ್ಯಾಂಕ್ ಮಾಡಿ ಅದನ್ನು ಬಂಡಾವಾಳ ಶಾಹಿಗಳಿಗೆ ನೀಡುತ್ತಿದೆ. ಅದೇ ಬಗರದ ಹುಕುಂ ಭೂಮಿಗಾಗಿ ಅರ್ಜಿ ಹಾಕಿದವರಿಗೆ ಸರ್ಕಾರ ಭೂಮಿಯನ್ನು ನೀಡುತ್ತಿಲ್ಲ. ಇಂತಹ ನಿರ್ಧಾರಗಳ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸಂಚಾಲಕ ಕುಮಾರ ಸಮತಳ ಹೇಳಿದರು.