ಶಿವಮೊಗ್ಗ: ದಿಢೀರ್ ಸುರಿದ ಭಾರಿ ಮಳೆಗೆ ಶಿವಮೊಗ್ಗ ನಗರದ ಬಾಪೂಜಿ ನಗರದ ಅಂಗಡಿ-ಮುಗ್ಗಟ್ಟುಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಅವೈಜ್ಞಾನಿಕ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರಿಣಾಮವಾಗಿ ಈ ಅವ್ಯವಸ್ಥೆ ಸಂಭವಿಸಿದೆ ಎಂಬ ಆರೋಪವಿದೆ.
ಚರಂಡಿಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗದೇ ರಸ್ತೆ ಮೇಲೆ ಹರಿದಿದೆ. ಹಾಗಾಗಿ ರಸ್ತೆ ಅಕ್ಕ-ಪಕ್ಕದಲ್ಲಿರುವ ಅಂಗಡಿ-ಮುಗ್ಗಟ್ಟುಗಳಿಗೂ ನೀರು ನುಗ್ಗಿದ್ದು ಬಾಪೂಜಿ ನಗರದ ಸಾರ್ವಜನಿಕರು ಮಹಾನಗರ ಪಾಲಿಕೆಗೆ ಹಿಡಿ ಶಾಪ ಹಾಕಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಮಳೆ ಆಗಿರಲಿಲ್ಲ. ಆದರೆ ಶುಕ್ರವಾರ ಸಂಜೆ ವೇಳೆಗೆ ದಿಢೀರ್ ಸುರಿದ ಮಳೆಯಿಂದಾಗಿ ಅವಾಂತರ ಸೃಷ್ಠಿ ಆಗಿದೆ.
ಇದನ್ನೂ ಓದಿ: ಡ್ರಗ್ಸ್ ವಿಚಾರವನ್ನು ಕೇವಲ ಸಿನಿಮಾ ರಂಗಕ್ಕೆ ಮಾತ್ರ ಸೀಮಿತ ಮಾಡಬಾರದು : ನಟ ಚೇತನ್