ETV Bharat / city

ಶಿವಮೊಗ್ಗದಲ್ಲಿ ಮಳೆ ನೀರಲ್ಲಿ ಸಿಲುಕಿಕೊಂಡಿದ್ದ ಎರಡು ಕುಟುಂಬಗಳ ರಕ್ಷಣೆ

ಮಳೆಗೆ ರಾಜ್ಯಕ್ಕೆ ರಾಜ್ಯವೇ ತತ್ತರಿಸಿ ಹೋಗಿದೆ. ಈ ನಡುವೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ವೃದ್ಧ ದಂಪತಿ ಸೇರಿದಂತೆ ಮಳೆ ನೀರಿನಲ್ಲಿ ಸಿಲುಕಿದ್ದ 2 ಕುಟುಂಬಗಳನ್ನು ರಕ್ಷಿಸಲಾಗಿದೆ.

ಮಳೆ ನೀರಿನಲ್ಲಿ ಸಿಲುಕಿಕೊಂಡಿದ್ದ ಎರಡು ಕುಟುಂಬಗಳ ರಕ್ಷಣೆ
author img

By

Published : Aug 6, 2019, 9:04 PM IST

ಶಿವಮೊಗ್ಗ: ಭಾರಿ ಮಳೆಯಿಂದ ನೀರಿನಲ್ಲಿ ಸಿಲುಕಿಕೊಂಡಿದ್ದ ಎರಡು ಕುಟುಂಬಗಳನ್ನು ಜಿಲ್ಲೆಯ ಸಾಗರದಲ್ಲಿ ರಕ್ಷಣೆ ಮಾಡಲಾಗಿದೆ.

ವಿಪರೀತ ಮಳೆಯಿಂದ ಸಾಗರದ ವಿನೋಬನಗರಕ್ಕೆ ಮಳೆ ನೀರು ನುಗ್ಗಿದ ಪರಿಣಾಮ ಬಡಾವಣೆಯ ಮನೆಗಳ ಒಳಗೆ ನೀರು ನುಗ್ಗಿತ್ತು. ಇದರಿಂದ ಕೆಲವರು ಮನೆಯಿಂದ ಹೊರ ಬಂದು ಎತ್ತರದ ಪ್ರದೇಶಗಳಿಗೆ ಬಂದಿದ್ದರು. ಆದರೆ ಅದೇ ಬಡಾವಣೆಯ ವೃದ್ಧ ದಂಪತಿ ಮನೆಯಿಂದ ಹೊರ ಬರಲಾಗದೇ ಪರದಾಡುವಂತಾಗಿತ್ತು. ‌ಈ ವೇಳೆ ಸ್ಥಳೀಯರು ಹಗ್ಗ ಕಟ್ಟಿ ದಂಪತಿಗಳನ್ನು ರಕ್ಷಿಸಿ ಸಂಬಂಧಿಕರ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

Protection of two families
ರಕ್ಷಣಾ ಕಾರ್ಯ

ಇನ್ನು ಸಾಗರದ ಗಣಪತಿ ಕೆರೆ ಪಕ್ಕದ ಜಮೀನಿನಲ್ಲಿ ವಾಸವಿರುವ ಈಶ್ವರಪ್ಪ ಎಂಬುವವರ ಮನೆ, ಕೆರೆ ಕೋಡಿ ಬಿದ್ದು ನೀರು ನುಗ್ಗಿತ್ತು. ಇದರಿಂದ ಮನೆಯ ವಸ್ತುಗಳೆಲ್ಲ ನೀರಿನಲ್ಲಿ ತೇಲಿ ಹೋಗಿವೆ. ತಕ್ಷಣ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಬಂದು ಮನೆಯಲ್ಲಿದ್ದ ಮೂವರು ಹಾಗೂ ಎರಡು ಹಸುಗಳನ್ನು ರಕ್ಷಿಸಿ, ಪಕ್ಕದ ನಿರ್ಮಾಣ ಹಂತದ ಸಮುದಾಯ ಭವನಕ್ಕೆ ಹಸ್ತಾಂತರಿಸಲಾಗಿದೆ.

ಮಳೆ ನೀರಿನಲ್ಲಿ ಸಿಲುಕಿಕೊಂಡಿದ್ದ ಎರಡು ಕುಟುಂಬಗಳ ರಕ್ಷಣೆ

ಸಕಾಲಕ್ಕೆ ಅಗ್ನಿ ಶಾಮಕದಳ ಬಾರದೇ ಹೋಗಿದ್ದರೆ, ಜಾನುವಾರುಗಳು ನೀರಿನಲ್ಲಿ ತೇಲಿ ಹೋಗುತ್ತಿದ್ದವು ಎನ್ನಲಾಗಿದೆ. ಸ್ಥಳಕ್ಕೆ ನಗರಸಭೆ ಸದಸ್ಯ ಲಿಂಗರಾಜು ಭೇಟಿ‌ ನೀಡಿ ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ.

Intro:ಮಳೆ ನೀರಿನಲ್ಲಿ ಸಿಲುಕಿ ಕೊಂಡಿದ್ದ ಎರಡು ಕುಟುಂಬಗಳ ರಕ್ಷಣೆ.

ಶಿವಮೊಗ್ಗ: ಭಾರಿ ಮಳೆಯಿಂದ ನೀರಿನಲ್ಲಿ ಸಿಲುಕಿ ಕೊಂಡಿದ್ದ ಎರಡು ಕುಟುಂಬಗಳನ್ನು ಸಾಗರದಲ್ಲಿ ರಕ್ಷಣೆ ಮಾಡಲಾಗಿದೆ. ವೀಪರೀತ ಮಳೆಯಿಂದ ಸಾಗರದ ವಿನೋಬನಗರಕ್ಕೆ ಮಳೆ ನೀರು ನುಗ್ಗಿದ ಪರಿಣಾಮ ಬಡಾವಣೆಯ ಮನೆಗಳ ಒಳಗೆಲ್ಲಾ ನೀರು ನುಗ್ಗಿತ್ತು. ಇದರಿಂದ ಕೆಲವರು ಮನೆಯಿಂದ ಹೊರ ಬಂದು ಎತ್ತರದ ಪ್ರದೇಶಕ್ಕೆ ಆಗಮಿಸಿದ್ದರು.Body:ಆದ್ರೆ, ಅದೇ ಬಡಾವಣೆಯ ವೃದ್ದ ದಂಪತಿಗಳಿಗೆ ಮನೆಯಿಂದ ಹೊರ ಬರಲು ಆಗದೆ ಪರದಾಡುವಂತೆ ಆಗಿತ್ತು.‌ಈ ವೇಳೆ ಸ್ಥಳೀಯರು ಹಗ್ಗ ಕಟ್ಟಿ ದಂಪತಿಗಳನ್ನು ರಕ್ಷಿಸಿ ಸಂಬಂಧಿಕರ ಮನೆಗೆ ಕಳುಹಿಸಿ ಕೊಟ್ಟಿದ್ದಾರೆ. ಇನ್ನೂ ಸಾಗರದ ಗಣಪತಿ ಕೆರೆ ಪಕ್ಕದ ಜಮೀನಿನಲ್ಲಿ ವಾಸವಿರುವ ಈಶ್ವರಪ್ಪ ಎಂಬುವರ ಮನೆಗೆ ಕೆರೆ ಕೊಡಿ ಬಿದ್ದು ನೀರು ನುಗ್ಗಿದೆ.Conclusion: ಇದರಿಂದ ಮನೆಯ ವಸ್ತುಗಳೆಲ್ಲಾ ನೀರಿನಲ್ಲಿ ತೇಲಿ ಹೋಗಿವೆ. ತಕ್ಷಣ ಸ್ಥಳಕ್ಕೆ ಅಗ್ನಿ ಶಾಮಕದಳದವರು ಬಂದು ಈಶ್ವರಪ್ಪನವರ ಮನೆಯಲ್ಲಿದ್ದ ಮೂವರನ್ನು ಹಾಗೂ ಎರಡು ಹಸುಗಳನ್ನು ರಕ್ಷಿಸಿ ಪಕ್ಕದ ನಿರ್ಮಾಣ ಹಂತದ ಸಮುದಾಯ ಭವನಕ್ಕೆ ಕಳುಹಿಸಿದ್ದಾರೆ. ಸಕಾಲಕ್ಕೆ ಅಗ್ನಿ ಶಾಮಕದಳ ಬಾರದೆ ಹೋಗಿದ್ದರೆ, ಜಾನುವಾರುಗಳು ನೀರಿನಲ್ಲಿ ತೇಲಿ ಕೊಂಡು ಹೋಗುತ್ತಿದ್ದವು ಎನ್ನಲಾಗಿದೆ. ಸ್ಥಳಕ್ಕೆ ನಗರಸಭ ಸದಸ್ಯ ಲಿಂಗರಾಜು ಭೇಟಿ‌ ನೀಡಿ ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.