ಶಿವಮೊಗ್ಗ: ಲಾಕ್ಡೌನ್ ಸಡಿಲಿಕೆ ಹಿಂಪಡೆಯಬೇಕು. ಇಲ್ಲವಾದರೆ ಶಿವಮೊಗ್ಗಕ್ಕೂ ಕೊರೊನಾ ಕಟಂಕ ಕಾಡಬಹುದು ಎಂದು ಕರ್ನಾಟಕ ಮುಸ್ಲಿಂ ಜಮಾಅತ್ನ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ ಮುಸ್ಲಿಯಾರ್ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋವಿಡ್-19ಗೆ ಇಡೀ ಜಗತ್ತೇ ತಲ್ಲಣಗೊಂಡಿದೆ. ಅದರಂತೆ ಕರ್ನಾಟಕದಲ್ಲೂ ಸಹ ಅನೇಕ ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಹರಡಿದೆ. ಇಂತಹ ಸಂದರ್ಭದಲ್ಲಿ ಲಾಕ್ಡೌನ್ ಸಡಲಿಸಿರುವುದು ಸರಿ ಅಲ್ಲ. ಹಾಗಾಗಿ ಲಾಕ್ಡೌನ್ ಸಡಿಲಿಕೆ ಹಿಂಪಡೆದು ಈ ಹಿಂದೆ ಬಿಗಿ ಮಾಡಿದಂತೆ ಲಾಕ್ಡೌನ್ ಬಿಗಿಗೊಳಿಸಬೇಕು. ಇಲ್ಲವಾದರೆ ಗ್ರೀನ್ ಝೋನ್ ಆಗಿರುವ ಶಿವಮೊಗ್ಗದಲ್ಲೂ ಸಹ ಕೊರೊನಾ ವೈರಸ್ ಹರಡುವ ಭೀತಿ ಎದುರಾಗಬಹುದು ಎಂದರು.
ಅಕ್ಕಪಕ್ಕದ ಜಿಲ್ಲೆಗಳಾದ ದಾವಣಗೆರೆ, ಹಾವೇರಿಯಲ್ಲಿ ಸಹ ಕೊರೊನಾ ಕಾಣಿಸಿಕೊಂಡಿದೆ. ಇದರಿಂದಾಗಿ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ. ಹಾಗಾಗಿ ಕೊಡಲೇ ಲಾಕ್ಡೌನ್ ಬಿಗಿಗೊಳಿಸಿ ಎಂದು ಒತ್ತಾಯಿಸಿದರು.
ಮುಸ್ಲಿಂ ಸಮುದಾಯದವರಿಗೆ ರಂಜಾನ್ ಹಬ್ಬವನ್ನು ಸರಳವಾಗಿ ಆಚರಿಸಲು ಹೇಳಿದ್ದೇವೆ. ಹಾಗಾಗಿ ಅನಾವಶ್ಯಕವಾಗಿ ಖರೀದಿಗೆ ಹೊರಗಡೆ ಬರಬೇಡಿ. ಮನೆಯಲ್ಲಿಯೇ ಸರಳವಾಗಿ ಹಬ್ಬ ಆಚರಿಸಿಕೊಳ್ಳಬೇಕು ಎಂದರು.