ETV Bharat / city

ಜನಾಶೀರ್ವಾದ ಯಾತ್ರೆಯಲ್ಲೂ 'ನೋ ನೆಟ್​​​ವರ್ಕ್,ನೋ ವೋಟಿಂಗ್' ಅಭಿಯಾನದ್ದೇ ಸದ್ದು.. - ಶಿವಮೊಗ್ಗ ಲೇಟೆಸ್ಟ್ ನ್ಯೂಸ್

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಇನ್ನೊಂದು ವಾರದಲ್ಲಿ ಕೇಂದ್ರದಿಂದ ಒಂದು ತಂಡವನ್ನು ಶಿವಮೊಗ್ಗಕ್ಕೆ ಕಳುಹಿಸುತ್ತೇನೆ. ಅವರು ಇಲ್ಲಿಯ ನೆಟ್​ವರ್ಕ್​​ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಿ, ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು..

no network no voting campaign matter discussed in janashirvada yatre
ಜನಾಶೀರ್ವಾದ ಯಾತ್ರೆಯಲ್ಲೂ ನೋ ನೆಟ್​​​ವರ್ಕ್ ನೋ ವೋಟಿಂಗ್ ಅಭಿಯಾನದ್ದೇ ಸದ್ದು
author img

By

Published : Aug 18, 2021, 7:36 PM IST

Updated : Aug 19, 2021, 5:19 PM IST

ಶಿವಮೊಗ್ಗ : ವಸ್ತುನಿಷ್ಟವಾಗಿ, ಯಾವುದೇ ಪಕ್ಷದ ಹಂಗಿಲ್ಲದೇ ನ್ಯಾಯಸಮ್ಮತವಾಗಿ ಒಂದು ಹೋರಾಟ ಆರಂಭಗೊಂಡರೆ ಅದು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗುತ್ತದೆ ಎಂಬುದಕ್ಕೆ ಉತ್ತಮ ಉದಾಹರಣೆ ಮಲೆನಾಡಿನಲ್ಲಿ ಆರಂಭಗೊಂಡ ನೆಟ್​ವರ್ಕ್​​​ ಹೋರಾಟ.

ಜನಾಶೀರ್ವಾದ ಯಾತ್ರೆಯಲ್ಲೂ 'ನೋ ನೆಟ್​​​ವರ್ಕ್,ನೋ ವೋಟಿಂಗ್' ಅಭಿಯಾನದ್ದೇ ಸದ್ದು..

ನೋ ನೆಟ್​ವರ್ಕ್, ನೋ ವೋಟಿಂಗ್ : ಜಿಲ್ಲೆಯ ಕುಗ್ರಾಮ ಕಾರಣಿ ಹಾಗೂ ಹಾಳಸಸಿ ಎಂಬ ಶರಾವತಿ ಹಿನ್ನೀರಿನ ಕುಗ್ರಾಮಗಳಲ್ಲಿ 'ನೋ ನೆಟ್​ವರ್ಕ್, ನೋ ವೋಟಿಂಗ್'ಎಂಬ ಅಭಿಯಾನ ಜೊತೆಜೊತೆಗೆ ಹೋರಾಟ ಆರಂಭಗೊಂಡಿತ್ತು. ಕುಗ್ರಾಮದಲ್ಲಿ ಆರಂಭಗೊಂಡ ಈ ಹೋರಾಟ ಇದೀಗ ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆಗಳಿಗೂ ವ್ಯಾಪಿಸಿದೆ. ಜಿಲ್ಲಾ ಪಂಚಾಯತ್​​ ಹಾಗೂ ತಾಲೂಕು ಪಂಚಾಯತ್​​ ಚುನಾವಣೆ ಕಣ್ಮುಂದೆ ಇರುವ ಕಾರಣಕ್ಕಾಗಿ ಈ ಹೋರಾಟ ರಾಜಕಾರಣಿಗಳ ನಿದ್ದೆಗೆಡಿಸಿದೆ. ಶಿವಮೊಗ್ಗದಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲೂ ಈ ವಿಷಯ ಮಾರ್ದನಿಸಿದ್ದು ವಿಶೇಷ.

ಚುನಾವಣೆ ಬಹಿಷ್ಕಾರ?: ಮಲೆನಾಡಿನ ಕುಗ್ರಾಮಗಳಲ್ಲಿ ಮೊಬೈಲ್ ನೆಟ್​ವರ್ಕ್​​ ಎಂಬುದು ಮರೀಚಿಕೆಯಾಗಿದೆ. ಕೊರೊನಾ ಸಂದರ್ಭದಲ್ಲಿ ನಗರಗಳಲ್ಲಿ ಕೆಲಸ ಮಾಡುತ್ತಿದ್ದವರು ಹಳ್ಳಿಗಳಿಗೆ ಆಗಮಿಸಿ ವರ್ಕ್ ಫ್ರಂ ಹೋಂ ಮಾಡುವ ಸಂದರ್ಭ ಹೋರಾಟ ತೀವ್ರಗೊಂಡಿದೆ. ಮೊಬೈಲ್ ನೆಟ್​ವರ್ಕ್​​ ಟವರ್ ನಿರ್ಮಾಣ ಮಾಡಿದರೆ ಮಾತ್ರ ನಾವು ಮುಂದಿನ ಚುನಾವಣೆಯಲ್ಲಿ ಮತದಾನ ಮಾಡುತ್ತೇವೆ. ಇಲ್ಲದಿದ್ದಲ್ಲಿ ಚುನಾವಣೆಯನ್ನೇ ಬಹಿಷ್ಕಾರ ಮಾಡುತ್ತೇವೆ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.

ಇತರೆ ಜಿಲ್ಲೆಗೂ ಹರಡಿದ ಹೋರಾಟದ ಕಿಚ್ಚು : ಹೀಗೆ ಕಾರಣಿ ಎಂಬ ಕುಗ್ರಾಮದಲ್ಲಿ ಆರಂಭಗೊಂಡ ಹೋರಾಟ ಇದೀಗ ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೇ ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗೂ ವ್ಯಾಪಿಸಿದೆ. ಹೀಗಾಗಿ, ಖುದ್ದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರಿಗೆ ಮಲೆನಾಡು ಭಾಗದ ನೆಟ್​​ವರ್ಕ್​​ ಸಮಸ್ಯೆ ಪರಿಹರಿಸಬೇಕು, ಇದೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ತಿಳಿಸಿದರು.

ಜನಾಶೀರ್ವಾದ ಯಾತ್ರೆಯಲ್ಲಿ ಚರ್ಚೆ : ನೆಟ್​ವರ್ಕ್​​ ಸಮಸ್ಯೆ ಬಗ್ಗೆ ಶಿವಮೊಗ್ಗದಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಎಲ್ಲ ನಾಯಕರೂ ಈ ಬಗ್ಗೆ ಮಾತನಾಡಿದರು. ಹೇಗಾದರೂ ಮಾಡಿ ಈ ನೆಟ್​​​ವರ್ಕ್​​ ಸಮಸ್ಯೆ ಬಗೆಹರಿಸದೇ ಇದ್ದಲ್ಲಿ ಹೋರಾಟದ ತೀವ್ರತೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.

ಕ್ರಮ ಕೈಗೊಳ್ಳುವ ಭರವಸೆ : ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಇನ್ನೊಂದು ವಾರದಲ್ಲಿ ಕೇಂದ್ರದಿಂದ ಒಂದು ತಂಡವನ್ನು ಶಿವಮೊಗ್ಗಕ್ಕೆ ಕಳುಹಿಸುತ್ತೇನೆ. ಅವರು ಇಲ್ಲಿಯ ನೆಟ್​ವರ್ಕ್​​ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಿ, ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಇದನ್ನೂ ಓದಿ: ಅಫ್ಘಾನ್ ನಲ್ಲಿ‌ ಸಿಲುಕಿರುವ ಕನ್ನಡಿಗರನ್ನು ಕರೆತರಲು ಹಿರಿಯ ಐಪಿಎಸ್ ಅಧಿಕಾರಿ ನೇಮಿಸಿದ ಸರ್ಕಾರ

ಒಂದು ಕುಗ್ರಾಮದಲ್ಲಿ ಆರಂಭಗೊಂಡ ಮೊಬೈಲ್ ನೆಟ್ವರ್ಕ್ ಹೋರಾಟ ಇದೀಗ ಇಡೀ ಶಿವಮೊಗ್ಗ ಜಿಲ್ಲೆಯಾದ್ಯಂತ ವ್ಯಾಪಿಸಿದೆ. ಅಲ್ಲದೇ ಮುಂದೆ ನಡೆಯಲಿರುವ ಚುನಾವಣೆಗೂ ಹೋರಾಟದ ಬಿಸಿ ತಟ್ಟುವ ಸಾಧ್ಯತೆಯಿದೆ. ಇದೇ ಕಾರಣದಿಂದಾಗಿ ಹೇಗಾದರೂ ಮಾಡಿ ಈ ಸಮಸ್ಯೆ ಬಗೆಹರಿಸಬೇಕು ಎಂದು ಎಲ್ಲ ಪಕ್ಷದ ನಾಯಕರುಗಳು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ.

Last Updated : Aug 19, 2021, 5:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.