ಶಿವಮೊಗ್ಗ: ನರೇಂದ್ರ ಮೋದಿ ಕಾಂಗ್ರೆಸ್ ಮುಕ್ತ ಮಾಡಲು ಕಾರ್ಯಕರ್ತರಿಗೆ ಕರೆ ನೀಡಿದ್ದರು. ಈಗ ಕರ್ನಾಟಕದಲ್ಲಿ ಜೆಡಿಎಸ್ನವರೇ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಹೊರಟಿದ್ದಾರೆ ಎಂದು ಸಂಸದ ಬಿ.ವೈ ರಾಘವೇಂದ್ರ ವ್ಯಂಗ್ಯವಾಡಿದ್ದಾರೆ. ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಮೋದಿಯವರ ಸವಾಲನ್ನ ಜೆಡಿಎಸ್, ಗಂಭೀರವಾಗಿ ಸ್ವೀಕಾರ ಮಾಡಿದಂತೆ ಕಾಣುತ್ತಿದೆ. ಹಾಗಾಗಿ ತಾವೆಲ್ಲಾ ಗಮನಿಸಿದ್ದಿರಿ. ಈಗಾಗಲೇ ಶಿವಮೊಗ್ಗ, ತುಮಕೂರು, ಕಾರವಾರ, ಚಿಕ್ಕಮಗಳೂರು, ಬೆಂಗಳೂರು ಉತ್ತರ ಸೇರಿ ಎಂಟು ಸೀಟು ಪಡೆದುಕೊಳ್ಳುವ ಮೂಲಕ ಜೆಡಿಎಸ್, ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಹೊರಟಿದೆ. ನಾವೇನೂ ಮಾಡುವುದು ಬೇಡ. ಅವರೇ ಮಾಡುತ್ತಾರೆ ಎಂದು ಮೈತ್ರಿ ಪಕ್ಷದ ಕಾಲೆಳೆದರು. ನಿಷ್ಠಾವಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಈಗಲಾದರೂ ಚರ್ಚೆಮಾಡಿ ನಮ್ಮೊಂದಿಗೆ ಕೈ ಜೋಡಿಸಿ ಎಂದರು.
ಕೆಲವರು ಜಿಲ್ಲೆಯಲ್ಲಿ ಎರಡು ಕುಟುಂಬದ ನಡುವೆ ನಡೆಯುತ್ತಿರುವ ಚುನಾವಣೆ ಎನ್ನುತ್ತಿದ್ದಾರೆ. ಆದರೆ ಇದು ಎರಡು ಕುಟುಂಬದ ಚುನಾವಣೆಯಲ್ಲ. ದೇಶವೇ ನನ್ನ ಕುಟುಂಬ ಎನ್ನುವ ಮೋದಿಜೀ ಅವರ ನೇತೃತ್ವದ ಆಡಳಿತಕ್ಕಾಗಿ, ಹಾಗೂ ದೇಶದ ಅಭಿವೃದ್ಧಿಗಾಗಿ ನಡೆಯುತ್ತಿರುವ ಚುನಾವಣೆ ಎಂದರು.
ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗುವುದು ಕೂಡಾ ಅಷ್ಟೇ ಸತ್ಯ ಎಂದರು.