ಶಿವಮೊಗ್ಗ: ವಿಶ್ವದ ಎಲ್ಲ ದೇಶಗಳು ಕಾಶ್ಮೀರ್ ಫೈಲ್ಸ್ ಚಿತ್ರವನ್ನು ನೋಡಬೇಕು ಎಂದು ಸಚಿವ ಕೆ.ಎಸ್ ಈಶ್ವರಪ್ಪ ಮನವಿ ಮಾಡಿದರು. ನಗರದ ವೀರಭದ್ರೇಶ್ವರ ಥಿಯೇಟರ್ನಲ್ಲಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ವೀಕ್ಷಿಸಿದ ಬಳಿಕ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಶ್ಮೀರದಲ್ಲಿನ ಪಂಡಿತರ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಕೇಳಿದ್ದೆ, ಓದಿದ್ದೆ. ಆದರೆ, ಈ ಚಿತ್ರವನ್ನು ನೋಡಿದ ಬಳಿಕ ದುಃಖವನ್ನು ತಡೆಯಲಾಗುತ್ತಿಲ್ಲ. ಪಂಡಿತರ ಮೇಲೆ ನಡೆದ ಕ್ರೌರ್ಯವನ್ನು ನೋಡಿದರೆ ಮನುಷ್ಯತ್ವವೇ ಇಲ್ಲ ಎನ್ನುವಂತೆ ನಡೆದುಕೊಂಡಿದ್ದಾರೆ ಎನಿಸುತ್ತಿದೆ.
ಇದನ್ನೂ ಓದಿ: 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಮೆಚ್ಚಿಕೊಂಡ ಬಿಜೆಪಿ ನಾಯಕರು
ಭಾರತ ಶಾಂತಿಯ ದೇಶ ಎಂದು ಇಡೀ ವಿಶ್ವವೇ ಎಂದುಕೊಳ್ಳುತ್ತಿರುವ ಸಂದರ್ಭದಲ್ಲಿ ನಡೆದ ಈ ಕ್ರೌರ್ಯ ಅತ್ಯಂತ ಅಮಾನವೀಯ. ಇಷ್ಟು ಕ್ರೂರ ವ್ಯವಸ್ಥೆ ಆ ಸಂದರ್ಭದಲ್ಲಿ ಇತ್ತು ಎನ್ನುವುದನ್ನು ತಿಳಿಯಲು ಇಡೀ ವಿಶ್ವವೇ ಈ ಚಿತ್ರವನ್ನು ನೋಡಬೇಕು ಎಂದರು.