ETV Bharat / city

ನಾವೇನ್​ ಸಭೆಗೆ ದನ ಕಾಯೋದಕ್ಕೆ ಬರ್ತಿವಾ?… ಹೆಡ್​ ನರ್ಸ್ ಮೇಲೆ ಗರಂ ಆದ ಸಚಿವ ಈಶ್ವರಪ್ಪ

ಸಿಮ್ಸ್ ಆಸ್ಪತ್ರೆಯ ಹೆಡ್​ ನರ್ಸ್ ಚಂದ್ರಮತಿ‌‌ ಹೆಗಡೆ ಅವರು ಆಸ್ಪತ್ರೆಗೆ ಬೇಕಾದ ಮಾಹಿತಿಯನ್ನು ಸರಿಯಾಗಿ ಒದಗಿಸದ ಕಾರಣ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ತರಾಟೆಗೆ ತೆಗೆದು‌ಕೊಂಡಿದ್ದಾರೆ‌

Minister KS Ehwarappa meeting in Shivamogga
ಹೆಡ್​ ನರ್ಸ್ ಮೇಲೆ ಗರಂ ಆದ ಸಚಿವ ಈಶ್ವರಪ್ಪ
author img

By

Published : May 31, 2021, 7:46 PM IST

Updated : May 31, 2021, 10:09 PM IST

ಶಿವಮೊಗ್ಗ: ಸಿಮ್ಸ್ ಮೆಡಿಕಲ್‌ ಕಾಲೇಜಿನ ಕೋವಿಡ್ ನಿರ್ವಹಣೆ ಕುರಿತು ಸಭೆ ನಡೆಯುತ್ತಿದ್ದಾಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಆಸ್ಪತ್ರೆಯ ಹೆಡ್​ ನರ್ಸ್ ಚಂದ್ರಮತಿ‌‌ ಹೆಗಡೆ ಅವರನ್ನು ತರಾಟೆಗೆ ತೆಗೆದು‌ಕೊಂಡಿದ್ದಾರೆ‌

ಆಸ್ಪತ್ರೆಗೆ ಬೇಕಾದ ನರ್ಸ್​ಗಳ ಮಾಹಿತಿ ಕೇಳಿದಾಗ ಹೆಡ್ ನರ್ಸ್ ಚಂದ್ರಮತಿ‌ ಹೆಗಡೆ ಅವರು, ಮಾಹಿತಿ ಇದೆ ಎಂದರು. ಇದಕ್ಕೆ ಕೋಪಗೊಂಡ ಸಚಿವರು, ನಾನು ಕಳೆದ ಬಾರಿ ಮೀಟಿಂಗ್ ನಡೆಸಿದಾಗಲೂ ಸಹ ಸರಿಯಾದ ಮಾಹಿತಿ‌ ನೀಡಿರಲಿಲ್ಲ. ಈಗ ಮಾಹಿತಿ ನಿಮ್ಮ ಬಳಿ ಇಟ್ಟು‌ಕೊಂಡ್ರೆ ಹೇಗೆ ಎಂದು ತರಾಟೆಗೆ ತೆಗೆದುಕೊಂಡರು.

ಸರಿಯಾದ ಮಾಹಿತಿ ಕೊಡಲ್ಲ ಅಂದ್ರೆ, ನಾವೇನು ಹುಡುಗಾಟ ಆಡೋದಕ್ಕೆ ಬರ್ತಿವಾ ಇಲ್ಲಿ ಎಂದು ಗುಡುಗಿದ್ದಾರೆ. ಸಿಮ್ಸ್‌ ಕಾಲೇಜಿಗೆ ನರ್ಸ್​​​​ಗಳಿಲ್ಲ,‌ ಡಿ ಗ್ರೂಪ್‌ ನೌಕರರಿಲ್ಲ. ಕೆಲಸಕ್ಕೆ ಬಾರದವರನ್ನು ಕಿತ್ತು ಬಿಸಾಕಿ, ಹೊಸಬರನ್ನು ತೆಗೆದುಕೊಳ್ಳಬೇಕು ಎಂದರು. ಸಭೆಗೆ ಸುಮ್ಮನೆ ಕೂತು ಎದ್ದು ಹೋಗುವುದಕ್ಕೆ ಬರುತ್ತಿವಾ. ಮುಂದಿನ ಬುಧವಾರ ಸಭೆಗೆ ಬಂದಾಗ ಎಲ್ಲವನ್ನು ಸರಿಪಡಿಸಬೇಕು ಎಂದು ತಾಕೀತು ಮಾಡಿದರು.

Last Updated : May 31, 2021, 10:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.