ETV Bharat / city

ಸ್ನೇಹಿತನನ್ನೇ ಕೊಂದ ವ್ಯಕ್ತಿಗೆ ಜೀವಾವಧಿ ಶಿಕ್ಷೆ - ಜೀವಾವಧಿ ಶಿಕ್ಷೆ

2019 ರ ಜುಲೈನಲ್ಲಿ ಅಸ್ಸೋಂ ಮೂಲದ ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಪತ್ನಿ ಜೊತೆ ಅಸಭ್ಯವಾಗಿ ವರ್ತಿಸಿ, ಆಕೆಯ ಪತಿಯನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ‌ ಆದೇಶ ಹೊರಡಿಸಿದೆ.

ಜೀವಾವಧಿ ಶಿಕ್ಷೆ
ಜೀವಾವಧಿ ಶಿಕ್ಷೆ
author img

By

Published : Jan 6, 2022, 9:59 AM IST

ಶಿವಮೊಗ್ಗ: ಸ್ನೇಹಿತ ಪತ್ನಿ ಜೊತೆ ಅಸಭ್ಯವಾಗಿ ವರ್ತಿಸಿ, ಆಕೆಯ ಪತಿಯನ್ನೇ ಕೊಂದ ಆರೋಪಿಗೆ ಭದ್ರಾವತಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ‌ ಆದೇಶ ಹೊರಡಿಸಿದೆ.

ಮನ್ಸೂರ್ ಅಲಿಖಾನ್ ಎಂಬಾತ ಶಿಕ್ಷೆಗೆ ಗುರಿಯಾದ ಆರೋಪಿ. ಈತ 2019 ರ ಜುಲೈನಲ್ಲಿ ಅಸ್ಸೋಂ ಮೂಲದ ನಬೀಕುಲ್ ಇಸ್ಲಾಂ (21) ಎಂಬಾತನ ಕೊಲೆ ಮಾಡಿದ್ದ. ಮನ್ಸೂರ್ ಅಲಿಖಾನ್ ಮತ್ತು ನಬೀಕುಲ್ ಇಸ್ಲಾಂ ಭದ್ರಾವತಿಯ ಗೌಡ್ರಳ್ಳಿಯಲ್ಲಿ ಅಕ್ಕ- ಪಕ್ಕದ ಮನೆಯಲ್ಲಿ ವಾಸವಾಗಿದ್ದರು.

ನಬೀಕುಲ್ಲಾ ವಾಸವಿದ್ದ ಮನೆಯ ಹಂಚನ್ನು ತೆಗೆದು ಮನೆಗೆ ನುಗ್ಗಿದ ಮನ್ಸೂರ್ ಅಲಿಖಾನ್, ನಬೀಕುಲ್ ಪತ್ನಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಇದನ್ನು ತಡೆಯಲು ಮುಂದಾದಾಗ ನಬೀಕುಲ್​ಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದ ಎಂದು ಆರೋಪಿಸಲಾಗಿತ್ತು.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಭದ್ರಾವತಿ ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಪ್ರಕರಣದ ವಾದ ಆಲಿಸಿದ ನ್ಯಾಯಾಧೀಶರಾದ ಆರ್.ವೈ.ಶಶಿಧರ್ ಅವರು ಆರೋಪಿಗೆ ಕಲಂ 302 ರ ಐಪಿಸಿ ಕಾಯ್ದೆಯಂತೆ ಜೀವಾವಧಿ ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿದ್ದಾರೆ.

ಈ ದಂಡ ಕಟ್ಟಲು ವಿಫಲವಾದರೆ ಮೂರು ವರ್ಷಗಳ ಕಾಲ ಶಿಕ್ಷೆ ಅನುಭವಿಸಬೇಕು ಹಾಗೂ ಕಲಂ 450 ರ ಐಪಿಸಿ ಅಡಿಯಲ್ಲಿ ಆರೋಪ ಸಾಬೀತಾದ ಕಾರಣ ಮೂರು ವರ್ಷ ಕಠಿಣ ಶಿಕ್ಷೆಯ ಕಾರಾಗೃಹವಾಸ ಹಾಗೂ 10 ಸಾವಿರ ರೂ. ದಂಡವನ್ನು ಕಟ್ಟಬೇಕು. ಒಂದು ವೇಳೆ ಕಟ್ಟಲು ವಿಫಲರಾದರೆ ಮತ್ತೆ 2 ತಿಂಗಳು ಕಾಲ ಸಾದಾ ಕಾರಾಗೃಹ ವಾಸ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.