ETV Bharat / city

ವಿಚಾರಣೆಗೆ ಕರೆ ತಂದಿದ್ದ ವ್ಯಕ್ತಿ ಸಾವು: ಲಾಕಪ್ ಡೆತ್‌ ಆರೋಪ

ಪೊಲೀಸ್ ವಿಚಾರಣೆ ನಡೆಸುವಾಗ ವ್ಯಕ್ತಿವೋರ್ವ ಕುಸಿದುಬಿದ್ದು ಸಾವನ್ನಪ್ಪಿದ್ದಾನೆ. ಇದು ಲಾಕಪ್ ಡೆತ್‌ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.

ರೋಧಿಸುತ್ತಿರುವ ಮೃತನ ಕುಟುಂಬದವರು
author img

By

Published : Jun 7, 2019, 4:37 AM IST

ಶಿವಮೊಗ್ಗ: ಪೊಲೀಸ್ ಠಾಣೆಗೆ ವಿಚಾರಣೆಗೆಂದು ಕರೆದುಕೊಂಡು ಬಂದಿದ್ದ ವ್ಯಕ್ತಿವೋರ್ವರು ವಿಚಾರಣೆ ನಡೆಸುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದು, ಲಾಕಪ್ ಡೆತ್‌ ಎಂಬ ಶಂಕೆ ವ್ಯಕ್ತವಾಗಿದೆ.

ಭದ್ರಾವತಿ ತಾಲೂಕು ಆಗರದಹಳ್ಳಿ ಕ್ಯಾಂಪ್​ನ ನಿವಾಸಿ ಬಾಲೇಶ್ (55) ಮೃತಪಟ್ಟವರು. ಇವರನ್ನು ವಿಚಾರಣೆಗೆಂದು ಹೊಳೆಹೊನ್ನೂರು ಪೊಲೀಸರು ಮನೆಯಿಂದ ಕರೆದುಕೊಂಡು ಬಂದಿದ್ದಾರೆ. ನಂತರ ಹೆಚ್ಚಿನ ವಿಚಾರಣೆಗೆಂದು‌ ಜಿಲ್ಲಾ ವರಿಷ್ಟಾಧಿಕಾರಿ ಡಾ.ಅಶ್ವಿನಿ ಅವರ ಮುಂದೆ ಹಾಜರುಪಡಿಸಿದ್ದಾರೆ. ನಗರದ ಡಿಎಆರ್ ಹಾಲ್​ನಲ್ಲಿ ವಿಚಾರಣೆ ನಡೆಸುವಾಗ ಬಾಲೇಶ್ ಅಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಇವರನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನಿಸುವಷ್ಟರಲ್ಲಿ ಬಾಲೇಶ್​ ಅವರ ಉಸಿರು ನಿಂತಿದೆ.

ರೋಧಿಸುತ್ತಿರುವ ಮೃತನ ಕುಟುಂಬದವರು

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯ ವ್ಯಾಪ್ತಿಯಡಿ ಓಸಿ ಬರೆಯುವ ಹಾಗೂ ಇಸ್ಪೀಟ್​ ಆಡುವವರನ್ನು ವಿಚಾರಣೆಗೆ ಕರೆಯಿಸಿಲಾಗಿತ್ತು. ಪೊಲೀಸರು ವಿಚಾರಣೆ ನೆಪದಲ್ಲಿ ಬಾಲೇಶನನ್ನು ಕರೆತರಲಾಗಿತ್ತು. ಇದು ಲಾಕಪ್ ಡೆತ್ ಎಂದು ಮೃತನ ಸಂಬಂಧಿಕರು ಹಾಗೂ ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ. ಇನ್ನು ಮೃತನ ಕುಟುಂಬದವರ ರೋಧನ ಮುಗಿಲು ಮುಟ್ಟಿತ್ತು.

Intro:ಪೊಲೀಸರ ವಿಚಾರಣೆಗೆ ಬಂದಿದ್ದ ವ್ಯಕ್ತಿ ಸಾವು: ಲಾಕಪ್ ಡೆತ್‌ ಶಂಕೆ.

ಶಿವಮೊಗ್ಗ: ಪೊಲೀಸ್ ಠಾಣೆಗೆ ವಿಚಾರಣೆಗೆಂದು ಕರೆದು ಕೊಂಡು ಬಂದ ವ್ಯಕ್ತಿಯೂರ್ವ ಪೊಲೀಸ್ ವಿಚಾರಣೆ ನಡೆಸುವಾಗ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಭದ್ರಾವತಿ ತಾಲೂಕು ಆಗರದಹಳ್ಳಿ ಕ್ಯಾಂಪ್ ನ ನಿವಾಸಿ ಬಾಲೇಶ್ (55) ವರ್ಷ ಇವರನ್ನು ವಿಚಾರಣೆಗೆಂದು ಹೊಳೆಹೊನ್ನೂರು ಪೊಲೀಸ್ರು ಮನೆಯಿಂದ ಕರೆದು ಕೊಂಡು ಬಂದಿದ್ದಾರೆ. ನಂತ್ರ ಹೆಚ್ಪಿನ ವಿಚಾರಣೆಗೆಂದು‌ ಜಿಲ್ಲಾ ವರಿಷ್ಟಾಧಿಕಾರಿ ಡಾ.ಅಶ್ವಿನಿ ರವರ ಮುಂದೆ ಹಾಜರು ಪಡಿಸಿದ್ದಾರೆ. Body:ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯ ಓಸಿ ಬರೆಯುವ ಹಾಗೂ ಇಸ್ಪಿಟ್ ಆಡುವವರನ್ನು ಕರೆದು ವಿಚಾರಣೆಗೆ ಕರೆಯಿಸಿದ್ದಾರೆ. ನಗರದ ಡಿಎಆರ್ ಹಾಲ್ ನಲ್ಲಿ ವಿಚಾರಣೆ ನಡೆಸುವಾಗ ಬಾಲೇಶ್ ಅಲ್ಲೆ ಕುಸಿದು ಬಿದ್ದಿದ್ದಾರೆ. ತಕ್ಷಣ ಇವರನ್ನು ಮೆಗ್ಗಾನ್ ಆಸ್ಪತ್ರೆಗೆ ರವಾಸುವಷ್ಟರಲ್ಲಿ ಬಾಲೇಶ್ ನ ಉಸಿರು ನಿಂತಿದೆ. ಪೊಲೀಸರು ವಿಚಾರಣೆಗೆಂದು ಕರೆದು ಕೊಂಡು ಬಂದು ವಿಚಾರಣೆ ನೆಪದಲ್ಲಿ ಬಾಲೇಶನನ್ನು ಕೊಲ್ಲಲಾಗಿದೆ. ಇದು ಲಾಕಪ್ ಡೆತ್ ಎಂದು ಮೃತನ ಸಂಬಂಧಿಕರು ಹಾಗೂ ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.Conclusion:ಬಾಲೇಶ್ ನಿಗೆ ಪತ್ನಿ.ಓರ್ವ ಪುತ್ರ ಹಾಗೂ ಪುತ್ರಿ ಇದ್ದು, ಪುತ್ರಿಯನ್ನು ಮದುವೆ ಮಾಡಿ ಕೊಡಲಾಗಿದೆ. ಡಿಎಆರ್ ಹಾಲ್ ನಲ್ಲಿ ಸ್ವತಃ ಎಸ್ಪಿ ಡಾ.ಅಶ್ವಿನಿರವರೆ ಖುದ್ದು ಹಲ್ಲೆ ನಡೆಸುತ್ತಾ ವಿಚಾರಣೆ ನಡೆಸುವಾಗ ನಡೆದ ಘಟನೆ ಇದಾಗಿದೆ. ಮೃತನ ಕುಟುಂಬದವರ ರೋಧನ ಮುಗಿಲು ಮುಟ್ಟಿತ್ತು.

ಬೈಟ್: ಕುಬೇರ ನಾಯ್ಕ. ಗ್ರಾಮಸ್ಥ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.