ETV Bharat / city

ಹಳಿ ತಪ್ಪಿದ ಬೆಂಗಳೂರು - ತಾಳಗುಪ್ಪ ರೈಲು: ಅದೃಷ್ಟವಶಾತ್​ ಪಾರು - Locomotive wheelslip

ಚಲಿಸುತ್ತಿದ್ದ ರೈಲು ಹಳಿ ತಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಬಳಿ ನಡೆದಿದೆ.

local train coach derails near Shivamogga
ಹಳಿ ತಪ್ಪಿದ ಬೆಂಗಳೂರು-ತಾಳಗುಪ್ಪ ರೈಲು
author img

By

Published : Dec 31, 2020, 10:58 PM IST

Updated : Jan 1, 2021, 4:42 AM IST

ಶಿವಮೊಗ್ಗ: ಬೆಂಗಳೂರಿನಿಂದ ತಾಳಗುಪ್ಪ ಕಡೆ ಹೊರಟಿದ್ದ ರೈಲು ಸೂಡೂರು ಹಾಗೂ ಅರಸಾಳುವಿನ ಕಾಡಿನ ನಡುವೆ ಹಳಿ ತಪ್ಪಿದ್ದು, ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ.

ರೈಲ್ವೇ ಎಂಜಿನ್ ಮುಂಭಾಗದ ಮೂರು ಚಕ್ರಗಳು ಹಳಿಯಿಂದ ಕೆಳಗೆ ಇಳಿದಿದ್ದು, ಅಪಾಯ ಅರಿತು ಚಾಲಕ ತಕ್ಷಣವೇ ಬ್ರೇಕ್ ಹಾಕಿದ ಪರಿಣಾಮ ಇಂಜಿನ್ ಪೂರ್ಣ ಪ್ರಮಾಣದಲ್ಲಿ ಇಳಿದಿಲ್ಲ. ಹಳಿ ಮೇಲಿನ ಜಲ್ಲಿಕಲ್ಲು ಅತ್ತಿತ್ತ ಹಾರಿ ಹೋಗಿದ್ದು, ಜನರಲ್ ಬೋಗಿಗಳೆಲ್ಲಾ ಧೂಳಿನಿಂದ ಆವೃತ್ತವಾಗಿವೆ.

ಹಳಿ ತಪ್ಪಿದ ರೈಲು

ರೈಲು ಹಳಿ ತಪ್ಪುತ್ತಿದ್ದಂತೆ ಒಮ್ಮೆಲೆಗೆ ಪ್ರಯಾಣಿಕರು ಆತಂಕಕ್ಕೆ ಒಳಗಾದರು. ಅದೃಷ್ಟಾವಶಾತ್​​ ಯಾವುದೇ ಹಾನಿ ಜರುಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ದೌಡಾಯಿಸಿ ಸ್ಥಳ ಪರಿಶೀಲನೆ ನಡೆಸಿದರು. ಈ ರೈಲು ಬೆಳಗ್ಗೆ ಬೆಂಗಳೂರಿಗೆ ವಾಪಸ್ ಆಗಬೇಕಿತ್ತು.

Last Updated : Jan 1, 2021, 4:42 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.