ಶಿಕಾರಿಪುರ: ತಾಲೂಕಿನ ಸಂಡ ಗ್ರಾಮದ ಪಶು ಆಹಾರ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕ ಈರಪ್ಪ ಮಾವಲಿ ಹೃದಯಾಘಾತದಿಂದ ಮೃತ ಪಟ್ಟಿದರು. ಕುಟುಂಬದವರಿಗೆ ನೆರವಾಗುವ ಉದ್ದೇಶದಿಂದ ಅವರೊಂದಿಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರು ತಮ್ಮ ಒಂದು ದಿನದ ವೇತನವನ್ನು ಮೃತರ ಕುಟುಂಬಕ್ಕೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮೃತನಿಗೆ ಪತ್ನಿ, 2 ಹೆಣ್ಣು ಹಾಗೂ ಒಂದು ಗಂಡು ಮಗುವಿದ್ದು, ಅವರ ಮುಂದಿನ ಭವಿಷ್ಯಕ್ಕೆ ಸಹಕಾರಿಯಾಗಲಿ ಎಂದು ಸಂಡ ಪಶು ಆಹಾರ ಘಟಕದಲ್ಲಿ ಕಾರ್ಯನಿರ್ವಹಿಸುವ ಗುತ್ತಿಗೆ ಕಾರ್ಮಿಕರು, ಹಮಾಲಿಗಳು ಸೇರಿ ತಮ್ಮ ಒಂದು ದಿನದ ಒಟ್ಟು ರೂ.1,080,00 ಸಾವಿರ ಹಣವನ್ನು ಘಟಕದ ವ್ಯವಸ್ಥಾಪಕ ಸದಾಶಿವಪ್ಪ ಅವರ ಮೂಲಕ ನೀಡಿದ್ದಾರೆ.