ಶಿವಮೊಗ್ಗ: ಧರ್ಮದ ವಿಚಾರದಲ್ಲಿ ನಾನು ಇನ್ಮುಂದೆ ತಲೆ ಹಾಕಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದು ರಂಭಾಪುರಿ ಶ್ರೀಗಳು ಹೇಳಿದ್ದಾರೆ. ಆದರೆ, ಸಿದ್ದರಾಮಯ್ಯ ಅವರು ನಾನು ಹಾಗೆ ಹೇಳಿಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದ ರಂಭಾಪುರಿ ಶ್ರೀಗಳು ಹೇಳಿದ್ದು ಸತ್ಯವೋ ಅಥವಾ ಸಿದ್ದರಾಮಯ್ಯ ಹೇಳಿದ್ದು ಸತ್ಯವೋ ಎಂಬುವುದನ್ನು ಅವರುಗಳೇ ಬಹಿರಂಗ ಪಡಿಸಬೇಕೆಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಧರ್ಮದ ವಿಚಾರದಲ್ಲಿ ನಾನು ಹೋಗುವುದಿಲ್ಲ. ಹಿಂದಿನ ತಪ್ಪಿನ ಪ್ರಾಯಶ್ಚಿತವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದು ರಂಭಾಪುರಿ ಶ್ರೀಗಳು ಹೇಳಿದ್ದಾರೆ. ಆದರೆ, ಇದನ್ನು ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ಇದರಿಂದ ಯಾರು ಸರಿ ಎಂಬುದನ್ನು ಅವರೇ ಬಹಿರಂಗ ಪಡಿಸಬೇಕು ಎಂದರು.
ಯಡಿಯೂರಪ್ಪಗೆ ಕೇಂದ್ರ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಿರುವ ಕುರಿತು ಪ್ರತಿಕ್ರಿಯಿಸಿ ಸಿಎಂ ಹಾಗೂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಇದನ್ನು ಪದೇ ಪದೆ ಪ್ರಸ್ತಾಪ ಮಾಡುವ ಅವಶ್ಯಕತೆ ಇಲ್ಲ ಎಂದರು. ಶಾಲೆಗಳಲ್ಲಿ ಧರ್ಮ ಆಚರಣೆಯ ಕುರಿತು ಪ್ರತಿಕ್ರಿಯಿಸಿದ ಅವರು, ಯಾವ ದೇಶದಲ್ಲಿ ಯಾವ ಧರ್ಮದ ಆಚರಣೆ ಇದೆಯೋ ಅದನ್ನು ಆಚರಣೆ ಮಾಡಲಾಗುತ್ತದೆ ಎಂದರು.
ಇದನ್ನೂ ಓದಿ: ಧರ್ಮದ ವಿಚಾರವಾಗಿ ನನ್ನ ದಾರಿ ತಪ್ಪಿಸಿದರೆಂದು ಸಿದ್ದರಾಮಯ್ಯ ಹೇಳಿದ್ರು: ರಂಭಾಪುರಿ ಶ್ರೀ