ETV Bharat / city

ಹಿಜಾಬ್​-ಕೇಸರಿ ವಿವಾದ: ಬೂದಿ ಮುಚ್ಚಿದ ಕೆಂಡವಾದ ಮಲೆನಾಡು, ಪೊಲೀಸ್ ಹೈ ಅಲರ್ಟ್​ - ಹಿಜಾಬ್​-ಕೇಸರಿ ವಿವಾದ

ಶಿವಮೊಗ್ಗದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ ತಾರಕಕ್ಕೇರಿದ ಮಲೆನಾಡು ಇದೀಗ ಬೂದಿ ಮುಚ್ಚಿದ ಕೆಂಡದಂತಾಗಿದೆ. ಇದೇ ಕಾರಣಕ್ಕಾಗಿ ಪೊಲೀಸರು ಹೈ ಅಲರ್ಟ್​​ನಲ್ಲಿದ್ದಾರೆ.

Shivamogga on High alert
Shivamogga on High alert
author img

By

Published : Feb 9, 2022, 12:25 AM IST

Updated : Feb 9, 2022, 9:26 AM IST

ಶಿವಮೊಗ್ಗ: ಕೇಸರಿ ವರ್ಸಸ್ ಹಿಜಾಬ್ ವಿವಾದ ಶಿವಮೊಗ್ಗದಲ್ಲಿ ತಾರಕಕ್ಕೇರಿದ್ದು, ನಗರ ಬೂದಿ ಮುಚ್ಚಿದ ಕೆಂಡಂತಾಗಿದೆ. ಹೀಗಾಗಿ, ಪೊಲೀಸ್‌ ಇಲಾಖೆ ಫುಲ್​​ ಅಲರ್ಟ್ ಆಗಿದ್ದು, ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಬೇರೆ ಊರುಗಳಿಂದ ನಗರಕ್ಕೆ ಆಗಮಿಸುವ ಎಲ್ಲ ವಾಹನಗಳನ್ನು ತಪಾಸಣೆ ಮಾಡಿ ಒಳಗೆ ಕಳುಹಿಸಲಾಗ್ತಿದ್ದು, ನಗರದ ತುಂಬ ಚೆಕ್ ಪೋಸ್ಟ್​​ಗಳನ್ನು ಹಾಕಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ.

ಬೂದಿ ಮುಚ್ಚಿದ ಕೆಂಡವಾದ ಮಲೆನಾಡು, ಪೊಲೀಸ್ ಹೈ ಅಲರ್ಟ್​

ಶಿವಮೊಗ್ಗ ನಗರದ ವಿವಿಧ ಕಾಲೇಜುಗಳಲ್ಲಿ ಕಲ್ಲುತೂರಾಟ ಹಾಗೂ ಲಾಟಿ ಚಾರ್ಜ್ ಬಳಿಕ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ರೀತಿಯಲ್ಲೂ ಹಿಂಸಾತ್ಮಕ ಕೃತ್ಯಗಳು ನಡೆಯದಂತೆ ತಡೆಯಲು ಪೊಲೀಸ್ ಇಲಾಖೆ ವತಿಯಿಂದ ಬಿಗಿ ಬಂದೋಬಸ್ತ್ ಹಾಗೂ ಗಸ್ತು ಕಾರ್ಯಾಚರಣೆಯನ್ನು ಮಾಡಲಾಗುತ್ತಿದೆ.

ಇದನ್ನೂ ಓದಿರಿ: ತಿರಂಗಾ ಹಿಡಿದು ತಾವೆಲ್ಲ ಒಂದೇ ಎಂದು ಕಾಲೇಜಿಗೆ ಬಂದರು.. ಉನ್ಮಾದ ದ್ವೇಷವಲ್ಲವಿದು, ವಿದ್ಯಾರ್ಥಿಗಳ ದೇಶ ಭಕ್ತಿ..

Last Updated : Feb 9, 2022, 9:26 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.