ಶಿವಮೊಗ್ಗ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕರ್ನಾಟಕ ರಾಜ್ಯದಿಂದ ರಾಜ್ಯಸಭೆಗೆ ಸ್ಪರ್ಧಿಸಿದರೆ ಕಾಂಗ್ರೆಸ್ ಪಕ್ಷ ನಿರ್ನಾಮ ಆಗುತ್ತೆ. ಉತ್ತರಪ್ರದೇಶದಲ್ಲಿ ಚುನಾವಣಾ ಉಸ್ತುವಾರಿ ಅವರಿಗೆ ವಹಿಸಲಾಗಿತ್ತು. ಅಲ್ಲಿ 397 ಕ್ಷೇತ್ರಗಳ ಪೈಕಿ 394 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಡಿಪಾಸಿಟ್ ಬರದೇ ಇರಲು ಪ್ರಿಯಾಂಕಾ ಗಾಂಧಿ ಕಾರಣ. ಕಾಂಗ್ರೆಸ್ ಸೋಲಿಗೆ ಅವರ ಪಾತ್ರವೂ ಇದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ನಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್, ರಾಜ್ಯಸಭೆ ಚುನಾವಣಾ ವಿಚಾರ ನೀವು ಟಿವಿಗಳಲ್ಲಿ ತೋರಿಸುತ್ತಿರುವ ಹೆಸರು ಅರ್ಧ ಸತ್ಯ, ಅರ್ಧ ಸುಳ್ಳು. ಒಂದು ಎಸ್ಸಿ, ಎಸ್ಟಿ, ಒಂದು ಒಬಿಸಿ ಹಾಗೂ ಒಂದು ಜನರಲ್ ಕೆಟಗೆರಿ ಒಟ್ಟು ಐದು ಹೆಸರು ಸೂಚಿಸಲಾಗಿದೆ. ಇದರಲ್ಲಿ ವಿಜಯೇಂದ್ರ ಹೆಸರು ಸಹ ಇದೆ. ಎಲ್ಲಾ ಹೆಸರುಗಳನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ. ಈ ಬಗ್ಗೆ ಕೇಂದ್ರದ ನಾಯಕರು ತೀರ್ಮಾನ ಮಾಡುತ್ತಾರೆ ಎಂದರು.
ಪ್ರಿಯಾಂಕಾ ಗಾಂಧಿ ರಾಜ್ಯದಿಂದ ರಾಜ್ಯಸಭೆಗೆ ಸ್ಪರ್ಧಿಸುವಂತೆ ಆಹ್ವಾನ ವಿಚಾರವಾಗಿ ಮಾತನಾಡಿದ ಅವರು, ಪ್ರಿಯಾಂಕಾ ಗಾಂಧಿ ಅವರು ರಾಜ್ಯಕ್ಕೆ ಅವರ ಪಾದವನ್ನು ಮೊದಲು ಇಡಲಿ. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕೃತ ವಿಪಕ್ಷವಾಗಿದೆ. ರಾಜ್ಯದಿಂದ ರಾಜ್ಯಸಭೆಗೆ ಸ್ಪರ್ಧಿಸಿದರೆ ಅವರು ಪ್ರಿಯಾಂಕಾ ಗಾಂಧಿ ಗೆಲ್ಲುತ್ತಾರೆ. ಬಳಿಕ ರಾಜ್ಯದ ಉಸ್ತುವಾರಿ ವಹಿಸಿಕೊಳ್ಳುತ್ತಾರೆ. ಬಳಿಕ ರಾಜ್ಯದಲ್ಲಿ ಸಹ ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲೂ ಉಳಿಯಲ್ಲ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಬ್ರಿಗೇಡ್ ಸ್ಥಾಪನೆ ವಿಚಾರ : ಡಿಕೆಶಿ, ಪ್ರಿಯಾಂಕಾ ಅವರನ್ನು ರಾಜ್ಯದಿಂದ ರಾಜ್ಯಸಭೆಗೆ ಆಹ್ವಾನಿಸಿದ್ದಾರೆ. ಇದಕ್ಕೆ ವಿರುದ್ದವಾಗಿ ಸಿದ್ದು ಚೇಲಾಗಳು ಸಿದ್ದು ಮುಖ್ಯಮಂತ್ರಿ ಮಾಡುವ ಸಲುವಾಗಿ ಸಿದ್ದು ಬ್ರಿಗೇಡ್ ಆರಂಭಿಸಿದ್ದಾರೆ. ಡಿಕೆಶಿ ಹಾಗೂ ಸಿದ್ದು ನಡುವೆ ಇರುವ ಯುದ್ದ ನಿನ್ನೆ ಉದಯಪುರದಿಂದ ಆರಂಭವಾಗಿದೆ ಎಂದರು.
ಮದರಸಾಗಳಲ್ಲಿ ರಾಷ್ಟ್ರಗೀತೆ ವಿಚಾರ : ಇದನ್ನು ಕೇಳಿಯೇ ನನಗೆ ಬಹಳ ಸಂತೋಷವಾಯ್ತು. ರಾಷ್ಟ್ರ ದ್ರೋಹಿಗಳು, ಭಯೋತ್ಪಾದಕರ ಬಾಯಲ್ಲಿ ಕೂಡ ರಾಷ್ಟ್ರಗೀತೆ ಹೇಳುತ್ತೇವೆ ಅಂತಾ ಹೇಳಿರುವುದನ್ನು ಸ್ವಾಗತ ಮಾಡ್ತೇನೆ ಎಂದರು. ಆಜಾನ್ ಕೂಗುವ ವಿಚಾರದಲ್ಲಿ ಸಿದ್ದು, ಡಿಕೆಶಿ ಅವರು ಬಹಳ ವರ್ಷದಿಂದ ಆಜಾನ್ ಕೂಗುತ್ತಾರೆ.
ಬಿಜೆಪಿಯವರು ಏಕೆ ಅಡ್ಡ ಬರುತ್ತಾರೆ ಅಂತಿದ್ರು. ಮುಖಂಡ ಉಮರ್ ಷರೀಫ್ ನೇತೃತ್ವದಲ್ಲಿ ಆಜಾನ್ ಕೂಗದಿರಲು ನಿರ್ಧರಿಸಿದ್ದಾರೆ. ಹಿಂದು- ಮುಸಲ್ಮಾನರು ಒಟ್ಟಾಗಿ ಹೋಗೋಣ ಅಂದುಕೊಂಡಿದ್ದರೂ, ಕಾಂಗ್ರೆಸ್ನವರು ಇದಕ್ಕೆ ಬಿಡುತ್ತಿಲ್ಲ. ಕಾಂಗ್ರೆಸ್‌ನವರೇ ಇದಕ್ಕೆ ಅಡ್ಡ ಬರುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ : ವಿಶ್ವ ದಾಖಲೆ ಸೃಷ್ಟಿಸಿದ ಬೃಹತ್ ಆರೋಗ್ಯ ಮೇಳ