ETV Bharat / city

ಬಡ್ಡಿ ಮನ್ನಾ ಯೋಜನೆ ಅವಧಿ ಜೂ.​​​​ 30ರ ವರೆಗೆ ವಿಸ್ತರಣೆ: ಕೆಎಸ್​ಕೆಆರ್​ಡಿಬಿ ಅಧ್ಯಕ್ಷ - ಕೆಎಸ್ ಕೆಆರ್ ಡಿಬಿ ಅಧ್ಯಕ್ಷ ಷಡಕ್ಷರಿ ಸಲಹೆ

ಸಾಲ‌ ಮರುಪಾವತಿ ಬಡ್ಡಿಮನ್ನಾ ಯೋಜನೆಯನ್ನು ಜೂನ್​ 30ರವರೆಗೂ ವಿಸ್ತರಣೆ ಮಾಡಲಾಗಿದೆ, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ರಾಜ್ಯ ಸಹಕಾರಿ ಕೃಷಿ‌ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್​ ರಾಜ್ಯಾಧ್ಯಕ್ಷ ಷಡಕ್ಷರಿ ರೈತರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

Interest waiver period extends till July 30 kskrdb president said
ಬಡ್ಡಿ ಮನ್ನಾ ಯೋಜನೆಯ ಅವಧಿ ಜುಲೈ 30 ರ ವರೆಗೂ ವಿಸ್ತರಣೆ: ಕೆಎಸ್ ಕೆಆರ್ ಡಿಬಿ ಅಧ್ಯಕ್ಷ ಷಡಕ್ಷರಿ ಸಲಹೆ
author img

By

Published : Jun 11, 2020, 11:54 PM IST

Updated : Jun 12, 2020, 9:29 AM IST

ಶಿವಮೊಗ್ಗ: ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷ‌ ಷಡಕ್ಷರಿ ಅವರು ಶಿವಮೊಗ್ಗ ಜಿಲ್ಲಾ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್​ನ ಸಲಹಾ ಸಮಿತಿಯ ಸಭೆ ನಡೆಸಿದರು.

ಬಡ್ಡಿ ಮನ್ನಾ ಯೋಜನೆಯ ಅವಧಿ ಜೂ. 30 ರ ವರೆಗೂ ವಿಸ್ತರಣೆ: ಕೆಎಸ್ ಕೆಆರ್ ಡಿಬಿ ಅಧ್ಯಕ್ಷ ಷಡಕ್ಷರಿ ಸಲಹೆ

ಜಿಲ್ಲಾ ಬ್ಯಾಂಕ್ ಸಭಾಂಗಣದಲ್ಲಿ ಸಭೆ ನಡೆಸಿ, ಈ ವೇಳೆ ಜಿಲ್ಲೆಯಲ್ಲಿ ಸಾಲ ನೀಡಿಕೆ,‌ ಸಾಲ ವಸೂಲಾತಿ ಹಾಗೂ ಇನ್ನಿತರ ವಿಚಾರಗಳ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ರಾಜ್ಯ ಸರ್ಕಾರ ರೈತರಿಗಾಗಿಯೇ ಹೊಸ ಯೋಜನೆ ಜಾರಿಗೆ ತಂದಿದೆ. ನಮ್ಮ ಬ್ಯಾಂಕ್​ನಲ್ಲಿ ಸಾಲ ಪಡೆದ ರೈತರು ತಮ್ಮ ಸಾಲವನ್ನು ಮರುಪಾವತಿ ಮಾಡಿದರೆ ಅವರ ಬಡ್ಡಿ ಸಂಪೂರ್ಣ ಮನ್ನಾ ಮಾಡಲಾಗುತ್ತದೆ ಎಂದರು.

ಈ ಯೋಜನೆಯು ಮಾರ್ಚ್​​ವರೆಗೆ ಮಾತ್ರ ಎಂದು ಘೋಷಣೆ ಮಾಡಲಾಗಿತ್ತು, ಆದರೆ ಕೊರೊನಾದಿಂದಾಗಿ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಇದರಿಂದ ಸಾಲ‌ ಮರುಪಾವತಿ ಬಡ್ಡಿಮನ್ನಾ ಯೋಜನೆಯನ್ನು ಜೂನ್​​​ 30ರವರೆಗೂ ವಿಸ್ತರಣೆ ಮಾಡಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಷಡಕ್ಷರಿಯವರು ರೈತರಲ್ಲಿ ವಿನಂತಿ ಮಾಡಿದ್ದಾರೆ.

ರಾಜ್ಯದಲ್ಲಿ 366 ಕೋಟಿ ಸಾಲವಿದ್ದು, 366 ಕೋಟಿ ರೂ. ಬಡ್ಡಿ ಇದೆ. ಶಿವಮೊಗ್ಗ ಜಿಲ್ಲೆಯಲ್ಲಿ 3.136 ರೈತರು ಸಾಲ ಪಡೆದಿದ್ದು, 17 ಕೋಟಿ 6 ಲಕ್ಷ ರೂ. ಬಾಕಿ ರೈತರು ಕಟ್ಟಬೇಕಿದೆ. ಇದರ ಬಡ್ಡಿ 20 ಕೋಟಿ 87 ಲಕ್ಷ ರೂ.ಗಳಿದೆ. ರೈತರು ಅಸಲನ್ನು ಕಟ್ಟಿ ಬಡ್ಡಿ ಮನ್ನಾ ಮಾಡಿ ಕೊಳ್ಳಬೇಕಿದೆ ಎಂದರು. ಈ ವೇಳೆ ಜಿಲ್ಲಾ ವ್ಯವಸ್ಥಾಪಕ ಟೀಕಪ್ಪ ಸೇರಿ ಇತರರು ಹಾಜರಿದ್ದರು.

Last Updated : Jun 12, 2020, 9:29 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.