ETV Bharat / city

ಚಂದ್ರಗುತ್ತಿಯ ರೇಣುಕಾಂಬ ದೇವಸ್ಥಾನದ ಹುಂಡಿ ಎಣಿಕೆ: ಹರಿದು ಬಂತು ಹಣ - ಈಟಿವಿ ಭಾರತ ಕನ್ನಡ

ಐತಿಹಾಸಿಕ ಪ್ರಸಿದ್ಧ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 12,05,395 ರೂ. ಸಂಗ್ರಹವಾಗಿದೆ.

Hundi count of Sri Renukamba temple in Chandragutti
ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನದ ಹುಂಡಿ ಎಣಿಕೆ
author img

By

Published : Jul 30, 2022, 9:50 PM IST

ಶಿವಮೊಗ್ಗ: ಸೊರಬ ತಾಲೂಕಿನ ಪುರಾಣ ಹಾಗೂ ಐತಿಹಾಸಿಕ ಪ್ರಸಿದ್ಧ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ದೇವಸ್ಥಾನದ ಆಡಳಿತ ಮಂಡಳಿಯ ಕಚೇರಿಯಲ್ಲಿ ತಹಶೀಲ್ದಾರ್ ಎಸ್.ಎಸ್. ಶೋಭಲಕ್ಷ್ಮಿ ಅವರ ಸಮ್ಮುಖದಲ್ಲಿ ನಡೆಯಿತು. ಜುಲೈ ತಿಂಗಳಿನಲ್ಲಿ 12,05,395 ರೂ., ಸಂಗ್ರಹವಾಗಿದ್ದು, ಕಳೆದ ಮೇ ತಿಂಗಳಿನಲ್ಲಿ ಹುಂಡಿ ಎಣಿಕೆ ಕಾರ್ಯ ಮಾಡಿದಾಗ 22,71,900 ರೂ., ಹಾಗೂ ಮಾರ್ಚ್‌ನಲ್ಲಿ ಹುಂಡಿ ಎಣಿಕೆ ಮಾಡಿದ 24,54,445 ರೂ., ಗರಿಷ್ಠ ಮೊತ್ತದ ಹಣ ಸಂಗ್ರಹವಾಗಿತ್ತು.

ಹುಂಡಿ ಎಣಿಕೆ ಕಾರ್ಯದಲ್ಲಿ ಪ್ರಭಾರ ಉಪತಹಶೀಲ್ದಾರ್ ವಿ.ಎಲ್. ಶಿವಪ್ರಸಾದ್, ದೇವಸ್ಥಾನದದ ಆಡಳಿತ ಮಂಡಳಿ ಕಾರ್ಯನಿರ್ವಹಣಾಧಿಕಾರಿ ಎನ್.ಆರ್. ರಂಗಪ್ಪ, ಶಿರಸ್ತೆದಾರ್ ನಿರ್ಮಲಾ, ಮುಜರಾಯಿ ಇಲಾಖೆಯ ಎಂ. ಶೃತಿ ಸೇರಿದಂತೆ ಗ್ರಾಮ ಲೆಕ್ಕಿಗರು ಹಾಗೂ ದೇವಸ್ಥಾನದ ಸಿಬ್ಬಂದಿ ಪಾಲ್ಗೊಂಡಿದ್ದರು. ಹುಂಡಿ ಎಣಿಕೆ ಕಾರ್ಯ ನಡೆಯುವ ಕೊಠಡಿಗೆ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು.

ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನದ ಹುಂಡಿ ಎಣಿಕೆ

ದೇವಸ್ಥಾನಕ್ಕೆ ಸಾಕಷ್ಟು ಆದಾಯದ ಮೂಲವಿದ್ದರೂ ಸಹ ಭಕ್ತರಿಗೆ ಮತ್ತು ಪ್ರವಾಸಿಗರಿಗೆ ಸಮರ್ಪಕವಾದ ಮೂಲ ಸೌಲಭ್ಯಗಳಿಲ್ಲದಿರುವುದು ಸ್ಥಳೀಯರಿಗೆ ಬೇಸರದ ಸಂಗತಿಯಾಗಿದೆ.

ಇದನ್ನೂ ಓದಿ : ಆಗರ್ಭ ಶ್ರೀಮಂತ ಈ 'ತಿರುಪತಿ ತಿಮ್ಮಪ್ಪ'... ಎರಡು ವರ್ಷಗಳಲ್ಲಿ ₹1,500 ಕೋಟಿ ದೇಣಿಗೆ ಸಂಗ್ರಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.